

ಕಿನ್ನಿಗೋಳಿ: ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಸಮಾಜದಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ ಎಂದು ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಹೇಳಿದರು.
ಶ್ರೀದೇವಿ ಮಹಿಳಾ ಮಂಡಲ ಕಂಬಳಬೆಟ್ಟು ತೋಕೂರು 22ನೇ ವಾರ್ಷಿಕೋತ್ಸವದಲ್ಲಿ ‘ಪೊಂಜೋವುಲೆನ ತುಡರ ಪರ್ಬ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಮಮತಾ ಶರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ತೋಕೂರು ಯುವಕ ಮಂಡಲ ಮಾಜಿ ಅಧ್ಯಕ್ಷ ಹರಿದಾಸ್ ಭಟ್, ಗೋವಿಂದಾಸ್ ಕಾಲೇಜು ಉಪನ್ಯಾಸಕಿ ಅಕ್ಷತಾ ನವೀನ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಶಾಲೆ ಮುಖ್ಯಶಿಕ್ಷಕಿ ಸುನೀತಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆ ಕಾರ್ಯದರ್ಶಿ ಶೋಭಾ ವರದಿ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶಶಿಕಲಾ ಸಾಲಿಯಾನ್ ಸ್ವಾಗತಿಸಿದರು. ಸಂಸ್ಥೆ ಅಧ್ಯಕ್ಷೆ ವಿಲಾಸಿ ಮೆಂಡನ್ ವಂದಿಸಿದರು. ರಜನಿ ನಿರೂಪಿಸಿದರು.