ಕಸ ಸಂಗ್ರಹಣೆಗೆ ಯೋಜನೆ ಅನುಷ್ಠಾನ : ಬೆಳುವಾಯಿ ಗ್ರಾಮ ಸಭೆಯಲ್ಲಿ ನಿರ್ಣಯ

blank
blank

ಮೂಡುಬಿದಿರೆ:ಘನ ತ್ಯಾಜ್ಯ ನಿರ್ವಹಣೆಸ್ವಚ್ಛ ಬೆಳುವಾಯಿ’ ಎನ್ನುವ ಪರಿಕಲ್ಪನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ, ಕಸ ಸಂಗ್ರಹಣೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸುವ ಕುರಿತು ಬೆಳುವಾಯಿ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾಪಂ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ನಡೆದ 2024-25ನೇ ಸಾಲಿನ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮದ ಶುಚಿತ್ವ, ನೂತನ ಅಂಗನವಾಡಿ ಬೇಡಿಕೆ, ಚಿರತೆ ಕಾಟ ಸಹಿತ ಹಲವು ವಿಚಾರಗಳ ಚರ್ಚೆ ನಡೆಯಿತು.

ಸಿಸಿ ಕ್ಯಾಮರಾ ಅಳವಡಿಕೆ: ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್ ಗುರುತಿಸಲಾಗಿದೆ. ಐದು ಕಡೆಗಳಲ್ಲಿ ಇದಕ್ಕಾಗಿ ಸಿಸಿ ಕ್ಯಾಮರಾ ಅಳವಡಿಸುತ್ತೇವೆ. ಮುಂದಿನ ದಿನದಲ್ಲಿ ಅಗತ್ಯವಿದ್ದ ಕಡೆಗಳಲ್ಲಿ ಕ್ಯಾಮರಾ ಅಳವಡಿಸಲಾಗುವುದು. ಯಾರಾದರೂ ಕಸ ಬಿಸಾಡುವುದು ಕಂಡು ಬಂದಲ್ಲಿ ಅಂಥವರಿಗೆ ದಂಡ ವಿಧಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಸುರೇಶ್ ಪೂಜಾರಿ ಹೇಳಿದರು.

ರೂಟ್ ಮ್ಯಾಪ್: ಸ್ವಚ್ಛತಾ ವಾಹನ ಈಗಾಗಲೇ ಕಾರ್ಯಾಚರಿಸುತ್ತಿದ್ದು, ರೂಟ್ ಮ್ಯಾಪ್ ಮಾಡುವಂತೆ ಆಯಾ ವಾರ್ಡ್‌ಗಳ ಸದಸ್ಯರಿಗೆ ತಿಳಿಸಲಾಗಿದೆ. ಅವರಿಂದ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಿದ ಬಳಿಕ ರೂಟ್ ಮ್ಯಾಪ್‌ನ ಅನುಗುಣವಾಗಿ ಸ್ವಚ್ಛತಾ ವಾಹನ ಕಾರ್ಯನಿರ್ವಹಿಸಲಿದೆ ಎಂದು ಪಿಡಿಒ ಭೀಮಾ ನಾಯ್ಕ ತಿಳಿಸಿದರು.

ಸಿಆರ್‌ಪಿ ದಿನಕರ್ ನೋಡಲ್ ಅಧಿಕಾರಿಯಾಗಿದ್ದರು. ಉಪ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಸಾಲ್ಯಾನ್, ಸದಸ್ಯರು, ಆರೋಗ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಸ್ಕಾಂ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರ ವಾರ್ಡ್ ಸಭೆಗಳ ಮಾಹಿತಿ ನೀಡಿದರು.

ಟ್ರಾನ್ಸ್‌ಫಾರ್ಮರ್ ಸ್ಥಳಾಂತರಕ್ಕೆ ಒತ್ತಾಯ

ಬೆಳುವಾಯಿ ಚರ್ಚ್ ಶಾಲೆ ಬಳಿ ಅಪಾಯಕಾರಿ ಟ್ರಾನ್ಸ್‌ಫಾರ್ಮರ್ ಇದೆ. ಇದನ್ನು ಸ್ಥಳಾಂತರಿಸುವಂತೆ ಕಳೆದ ಗ್ರಾಮಸಭೆಯಲ್ಲಿ ನಿರ್ಣಯವೂ ಆಗಿದೆ. ಆದರೆ ಯಾವುದೇ ಸ್ಪಂದನೆ ಇಲ್ಲ ಎಂದು ಸದಸ್ಯ ಸೂರಜ್ ಆಳ್ವ ತಿಳಿಸಿದರು. ಸ್ಥಳ ಪರಿಶೀಲಿಸಿ, ಆದಷ್ಟು ಬೇಗ ಸ್ಥಳಾಂತರಿಸಲಾಗುವುದು ಎಂದು ಬೆಳುವಾಯಿ ವಿಭಾಗದ ಮೆಸ್ಕಾಂ ಶಾಖಾಧಿಕಾರಿ ಅಫ್ಸರ್ ಪಾಟೀಲ್ ಹೇಳಿದರು.

ಅಂಗನವಾಡಿ ಕೇಂದ್ರಕ್ಕೆ ಬೇಡಿಕೆ

ಕಾನದಲ್ಲಿ 400ಕ್ಕೂ ಅಧಿಕ ಮನೆಗಳಿದ್ದು, ಈಗಾಗಲೇ ಒಂದು ಅಂಗನವಾಡಿ ಕೇಂದ್ರ ಕಾರ್ಯಾಚರಿಸುತ್ತಿದೆ. 200 ಮನೆಗಳನ್ನೊಳಗೊಂಡಿರುವ ಒಂದು ಭಾಗದಲ್ಲಿ ಮಳೆಗಾಲದಲ್ಲಿ ಹೊಳೆಯಿಂದಾಗಿ ಮಕ್ಕಳಿಗೆ, ಪಾಲಕರಿಗೆ ಅಂಗನವಾಡಿ ಕೇಂದ್ರ ದಾಟಲು ಕಷ್ಟಕರವಾಗುತ್ತಿದೆ. ಈ ಭಾಗಕ್ಕೆ ಮತ್ತೊಂದು ಅಂಗನವಾಡಿ ಅವಶ್ಯಕತೆ ಇದ್ದು, ಪಂಚಾಯಿತಿಯಿಂದ ಸ್ಥಳ ಗುರುತಿಸಬೇಕೆಂದು ಸದಸ್ಯ ಭರತ್ ಶೆಟ್ಟಿ ಆಗ್ರಹಿಸಿದರು. ಸ್ಥಳ ಗುರುತಿಸುವ ಮೊದಲು, ಆ ಭಾಗದಲ್ಲಿ ಅಂಗನವಾಡಿಗೆ ಬರುವ ಮಕ್ಕಳ ಸಮೀಕ್ಷೆಯಾಗಬೇಕು. ಬಳಿಕ ಸರ್ಕಾರದಿಂದ ಅಂಗನವಾಡಿ ಕೇಂದ್ರ ಮಂಜೂರಾದ ಬಳಿಕ ಸ್ಥಳ ಗುರುತಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಕಾತ್ಯಾಯಿನಿ ತಿಳಿಸಿದರು.

ನಾನೂ ನಾಯಕಿ ತರಬೇತಿ ಕಾರ್ಯಾಗಾರ

ಬೊಬ್ಬೆಕೇರಿ ಶಾಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ

Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…