೧೬ರಂದು ಬೊಳ್ನಾಡು ಕ್ಷೇತ್ರದಲ್ಲಿ ಪೀಠ ಪ್ರತಿಷ್ಠಾಪನೆ

Published on

ವಿಟ್ಲ: ಎರುಂಬು ಸಿಂಹಮೂಲೆ ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಮಾ.೯ರಿಂದ ೧೬ರವರೆಗೆ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ತ್ರಿಕಾಲ ಪೂಜೆ, ಪೂರ್ಣಗ್ರಹಶಾಂತಿ ಹೋಮ, ಅಂಕುರಪೂಜೆ, ರಾತ್ರಿ ದುರ್ಗಾಪೂಜೆ, ಅಂಕುರ ಪೂಜೆ ನಡೆಯಿತು. ಸಸಿಹಿತ್ಲು ಮೇಳದವರಿಂದ ಶ್ರೀ ಭಗವತಿ ಮಹಾತ್ಮೆ ಯಕ್ಷಗಾನ ನಡೆಯಿತು.

ಶುಕ್ರವಾರ ಬೆಳಗ್ಗೆ ಗಣಪತಿ ಹವನ, ತ್ರಿಕಾಲ ಪೂಜೆ, ಅಂಕುರಪೂಜೆ, ಶ್ರೀ ಚಂಡಿಕಾ ಹವನ, ದುರ್ಗಾಪೂಜೆ, ರಾತ್ರಿ ನೂತನ ಬಿಂಬಗಳ ಜಲಾಽವಾಸ ನಡೆಯಲಿದೆ. ಸಂಜೆ ೬ರಿಂದ ತೋನ್ಸೆ ಪುಷ್ಕಳಕುಮಾರ್ ತಂಡದಿಂದ ಭಕ್ತಿ ಭಾವ, ಜಾನಪದ ಸಂಗೀತ ವೈಭವ ನಡೆಯಲಿದೆ. ಶನಿವಾರ ಗಣಪತಿ ಹೋಮ, ತ್ರಿಕಾಲ ಪೂಜೆ, ಅಂಕುರ ಪೂಜೆ, ಶಯ್ಯಾಪೂಜೆ, ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶಪೂಜೆ, ದುರ್ಗಾಪೂಜೆ, ರಾತ್ರಿ ಧ್ಯಾನಾಽವಾಸ, ದುರ್ಗಾಪೂಜೆ, ಅಽವಾಸ ಹೋಮ, ರಾತ್ರಿ ೭.೩೦ರಿಂದ ಜಗದೀಶ್ ಪುತ್ತೂರು ಅವರಿಂದ ಭಕ್ತಿ ಗಾನ ಸುಧೆ ನಡೆಯಲಿದೆ.

*ಪೀಠ ಪ್ರತಿಷ್ಠೆ, ಬ್ರಹ್ಮಲಶೋತ್ಸವ : ೧೬ರಂದು ಬೆಳಗ್ಗೆ ೮ರಿಂದ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪರಿವಾರ ದೈವಗಳ ಕಲಶಪೂಜೆ, ೧೧.೪೫ರ ಬಳಿಕ ಭಂಡಾರ ಕ್ಷೇತ್ರದಲ್ಲಿ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪೀಠ ಪ್ರತಿಷ್ಠಾಪನೆ, ೨.೨೦ರಿಂದ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ಧ್ವಜ ಪ್ರತಿಷ್ಠಾಪನೆ, ತಂಬಿಲ, ಮಹಾಪೂಜೆ ನಡೆಯಲಿದೆ. ಸಂಜೆ ೫.೩೦ರಿಂದ ಬೊಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಎನ್. ಉಚ್ಚಿಲ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವಿಟ್ಲ ಅರಮನೆಯ ಬಂಗಾರು ಅರಸರು, ಅಳಿಕೆ ಶ್ರೀ ಸತ್ಯ ಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್, ಉದ್ಯಮಿಗಳಾದ ಚಂದ್ರಶೇಖರ ಬೆಳ್ಚಾಡ, ರಾಜೇಂದ್ರ ಕುಮಾರ್, ನಗರಾಭಿವೃದ್ಧಿ ಪ್ರಾಽಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ ೮ರಿಂದ ತುಳುನಾಟಕ ಕಥೆ ಕೈಲಾಸ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net