ಅಡಿಕೆ ತೋಟ ನಾಶ

rain
ನಾಲ್ಕೂರು ಗ್ರಾಮದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸಲಾಯಿತು.
Published on

ಸುಬ್ರಹ್ಮಣ್ಯ: ನಾಲ್ಕೂರು ಗ್ರಾಮದ ಚಾರ್ಮತ, ವಲ್ಪಾರೆ, ಕಾಯರ್ ಮುಗೇರ್ ಬಳಿ ಸುರಿದ ಗಾಳಿ-ಮಳೆಗೆ ಹಲವಾರು ಮರ ಉರುಳಿ ಬಿದ್ದಿದ್ದು, ಕೃಷಿಗೂ ಹಾನಿಯಾಗಿದೆ.

ಕೆಲ ಕಡೆ ರಸ್ತೆಯೂ ಬ್ಲಾಕ್ ಆಗಿತ್ತು. 3 ವಿದ್ಯುತ್ ಕಂಬ ಮುರಿದು ಬಿದ್ದಿದೆ. ಶಿವಕುಮಾರ್ ಎಂಬುವರ 200ಕ್ಕೂ ಅಧಿಕ ಅಡಕೆ ಮರ, ಧರ್ಮಪಾಲ ಸಂಪ್ಯಾಡಿ ಅವರ 100ಕ್ಕೂ ಅಧಿಕ ಅಡಕೆ ಮರ, ನಾರಾಯಣ ಗೌಡ ವಲ್ಪಾರೆ, ಧನಂಜಯ ಸಂಪ್ಯಾಡಿ, ಯೋಗೀಶ್ ಕಾಯರ್ ಮುಗೇರ್, ಸುಂದರ ಕಾಯರ್ ಮುಗೇರ್, ಬೆಳ್ಯಪ್ಪ ಕಾಯರ್ ಮುಗೇರ್ ಮತ್ತಿತರರ ಕೃಷಿ ನಾಶವಾಗಿದೆ.

ರಸ್ತೆ ಬ್ಲಾಕ್ ತೆರವು

ಭಾಗದ ಕೆಲವು ರಸ್ತೆಗಳು ಬ್ಲಾಕ್ ಆಗಿ ಸಂಚಾರ ಸ್ಥಗಿತಗೊಂಡಿತ್ತು. ಮರಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ಅಧಿಕಾರಿಗಳನ್ನು ಕರೆಸಿ ಸಮೀಕ್ಷೆ ನಡೆಸುವ ಮತ್ತು ರಸ್ತೆ ಸುಸ್ಥಿರಗೊಳಿಸುವಲ್ಲಿ ಗ್ರಾ.ಪಂ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಕೊಯಿಲ, ಪ್ರಮೀಳಾ ಎರ್ದಡ್ಕ, ಲೀಲಾವತಿ ಅಂಜೇರಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net