

ರಾಯಚೂರು: ಮಗುವಿನೊಂದಿಗೆ ಆಸ್ಪತ್ರೆಗಾಗಿ ಲಿಂಗಸುಗೂರಿಗೆ ತೆರಳುತ್ತಿದ್ದ ಮಹಿಳೆಯ ಮೇಲೆ ಟಂಟಂ ವಾಹನ ಚಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಬೆಳಕಿಗೆ ಬಂದಿದೆ.
ಬಾಗಲಕೋಟೆಯ ಶಂಕರಪ್ಪ ಮುಳಗುಂದ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿದ್ದಾನೆ. ಟಂಟಂನಲ್ಲಿ ಮಗುವಿನ ಜತೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ನೆಪದಲ್ಲಿ ವಾಹನ ನಿಲ್ಲಿಸಿದ ಆರೋಪಿ ಚಾಲಕ ಶಂಕರಪ್ಪ, ಮಗು ಎತ್ತಿಕೊಂಡು ಜೋಳದ ಹೊಲದತ್ತ ಓಡಿದ್ದಾನೆ.
ತನ್ನ ಮಗುವನ್ನು ರಕ್ಷಿಸಲು ಆತನ ಹಿಂದೆ ಮಹಿಳೆಯೂ ಓಡಿದ್ದಾಳೆ. ಈ ವೇಳೆ ಮಹಿಳೆಯ ಮೇಲೆ ಚಾಲಕ ಅತ್ಯಾಚಾರ ನಡೆಸಲು ಯತ್ನಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಜನರು ಮಹಿಳೆಯನ್ನು ರಕ್ಷಣೆ ಮಾಡಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಿಂಗಸಗೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)