

ಸುಬ್ರಹ್ಮಣ್ಯ: ರೇಬಿಸ್ ಬಗ್ಗೆ ಜಾಗೃತರಾಗುವುದು ಅಗತ್ಯ. ಸಾಕು ಪ್ರಾಣಿಗಳಿಗೆ ಅಗತ್ಯವಾಗಿ ರೇಬಿಸ್ ಚುಚ್ಚುಮದ್ದು ಕೊಡಬೇಕು. ಎಚ್ಚರಿಕೆ ಮತ್ತು ಜಾಗೃತಿಯಿಂದ ಈ ರೋಗ ಹತ್ತಿಕ್ಕಬಹುದು ಎಂದು ಸುಬ್ರಹ್ಮಣ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಚೇತನ್ ಹೇಳಿದರು.
ಸುಬ್ರಹ್ಮಣ್ಯದ ಎಸ್‌ಎಸ್ ಪಿ.ಯು ಕಾಲೇಜಿನ ಪ್ರೌಢಶಾಲಾ ವಿಭಾಗ ಆಶ್ರಯದಲ್ಲಿ ಸುಬ್ರಹ್ಮಣ್ಯ ಪಶು ವೈದ್ಯಕೀಯ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಬುಧವಾರ ರೇಬಿಸ್ ಮತ್ತು ಪ್ರಾಣಿಜನ್ಯ ರೋಗದ ಮಾಹಿತಿ ಶಿಬಿರದಲ್ಲಿ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕಿ ನಂದಾ ಹರೀಶ್, ಶಿಕ್ಷಕರಾದ ಎಂ.ಕೃಷ್ಣ ಭಟ್, ಸುರೇಶ್, ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್. ಇದ್ದರು.