

ಕಟೀಲು: ಕಟೀಲಿನ ಒಬ್ಬ ಹುಡುಗ ಅಮೆರಿಕಕ್ಕೆ ಹೋಗಿ ಸಾಧನೆ ಮಾಡಿರುವುದು ಸಾಮಾನ್ಯ ವಿಷಯವಲ್ಲ, ಅದು ಒಂದು ದೊಡ್ದ ಸಾಧನೆ ಮಾತ್ರವಲ್ಲ, ಕಟೀಲು ಗ್ರಾಮಕ್ಕೆ ಕೀರ್ತಿ ಎಂದು ಕಟೀಲು ದೇವಳದ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.
ಅಮೆರಿಕದಲ್ಲಿ ನಡೆದ ಅಂತಾರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯಲ್ಲಿ ವಿವಿಧ ವಿಭಾಗದಲ್ಲಿ ಐದು ಬಂಗಾರದ ಪದಕ ಪಡೆದ ಕಟೀಲಿನ ಕೀರ್ತನ್ ಕುಂದರ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಸಾಯಿ ಗುರೂಜಿ, ಕೀರ್ತನ್ ಗುರು ವಿಜಯ ಕಾಂಚನ್, ಜಿಪಂ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಕೊಡೆತ್ತೂರುಗುತ್ತು ಗುತ್ತಿನಾರ್ ನಿತಿನ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಗಿರೀಶ್ ಶೆಟ್ಟಿ, ಅಭಿಲಾಷ್ ಶೆಟ್ಟಿ ಕಟೀಲು, ದೊಡ್ಡಯ್ಯ ಮೂಲ್ಯ ಕಟೀಲು, ತಿಮ್ಮಪ್ಪ ಕೋಟ್ಯಾನ್, ಕೀರ್ತನ್ ತಂದೆ ಚಂದ್ರಹಾಸ ಕುಂದರ್, ತಾಯಿ ನಿರ್ಮಲಾ, ಪ್ರೇಮ್‌ರಾಜ್ ಶೆಟ್ಟಿ ಬರ್ಕೆ, ನೀಲಯ್ಯ ಕೋಟ್ಯಾನ್, ಶೈಲೇಶ ಅಂಚನ್, ರಮಾನಂದ ಪೂಜಾರಿ, ಅಶೋಕ್ ಕೊಂಡೇಲ, ದುರ್ಗಾಪ್ರಸಾದ್ ಶೆಟ್ಟಿ, ಸೀತಾರಾಮ ಶೆಟ್ಟಿ, ವಿಜಯ ಶೆಟ್ಟಿ ಅಜಾರುಗುತ್ತು, ಶುಭಲತಾ ಶೆಟ್ಟಿ, ಸೂರಜ್ ಶೆಟ್ಟಿ ಕೊಂಡೇಲ, ಸಂತಾನ್ ಡಿಸೋಜ, ಶೋಭಾ, ಗಂಗಾಧರ ಶೆಟ್ಟಿ ಮತ್ತಿತರರಿದ್ದರು.
ಕಟೀಲು ಸೇತುವೆಯಿಂದ ರಥಬೀದಿವರೆಗೆ ಮೆರವಣಿಗೆ ಮೂಲಕ ಕೀರ್ತನ್ ಅವರನ್ನು ಕರೆತರಲಾಯಿತು. ರಾಜೇಂದ್ರಪ್ರಸಾದ್ ಎಕ್ಕಾರ್ ನಿರೂಪಿಸಿದರು.