

ಶಿವಮೊಗ್ಗ: ಸಾಗರ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದ ಶಂಕರ ಭಟ್ಟನ ಕೆರೆ ಸಮೀಪ ಎರಡು ಕಾಳಿಂಗ ಸರ್ಪಗಳ ಮಿಲನದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿದೆ.
ಹಾವುಗಳು ಸ್ವಚ್ಛಂದವಾಗಿ ಮಿಲನದಲ್ಲಿ ತೊಡಗಿದ್ದವು. ಆದರೆ ಏನು ಮಾಡೋದು ಹಾವುಗಳನ್ನು ನೋಡಿದ ಮನುಷ್ಯ ಇನ್ನು ಆ ಕಡೆ ತಲೆ ಹಾಕಿ ಮಲಗಲು ಹೆದರುತ್ತಾನೆಂದು ಉರಗ ತಜ್ಞರನ್ನು ಕರೆಯಿಸಲಾಯಿತು. ಬಳಿಕ ಎರಡು ಹಾವುಗಳನ್ನು ಹಿಡಿ, 'ಇಲ್ಲಿ ನಿಮ್ಮ ಆಟ ಬ್ಯಾಡ್ರಪಾ...ಫಾರೆಸ್ಟ್ ರೆಸಾರ್ಟ್ಗೆ ಹೋಗಿ' ಎಂದು ಕಾಡಿಗೆ ಬಿಡಲಾಯಿತು.
ಕಾಳಿಂಗ ಸರ್ಪಗಳು ಸುಮಾರು 10 ಅಡಿ ಉದ್ದ ಇದ್ದವು. ಹಾವುಗಳ ರಕ್ಷಣಾ ಕಾರ್ಯಾಚರಣೆ ವೇಳೆ ಉರಗ ತಜ್ಞ ಪುರದ ಮಾಧವ ಭಟ್, ಅರಣ್ಯ ಇಲಾಖೆಯ ನಾಗರಾಜ್ ಹಾಗೂ ಮಂಜಪ್ಪ ಮತ್ತಿತರರು ಇದ್ದರು.
ವಿಡಿಯೋ- ಫೋಟೋ ಕೃಪೆ: ಶ್ರೀನಾಥ ತಲವಾಟ