ಹೆಚ್ಚುತ್ತಿದೆ ವಿದ್ಯಾರ್ಥಿಗಳ ಹಾಜರಾತಿ: ಶಾಲೆ ಆರಂಭವಾದ 3ನೇ ದಿನಕ್ಕೆ ಶೇ.45ಕ್ಕೆ ಏರಿಕೆ

school
Published on

ಬೆಂಗಳೂರು: 6ರಿಂದ 8ನೇ ತರಗತಿ ಶಾಲೆ ಆರಂಭವಾದ ಮೂರನೇ ದಿನವಾದ ಬುಧವಾರ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಏರಿಕೆ ಕಂಡಿದೆ. ಮೊದಲ ದಿನ ಶೇ.30 ದಾಟದಿದ್ದ ಹಾಜರಾತಿ 3ನೇ ದಿನಕ್ಕೆ ಶೇ.45 ದಾಟಿದೆ.

6ನೇ ತರಗತಿ ಶೇ.46, 7ನೇ ತರಗತಿ ಶೇ.44.8 ಮತ್ತು 8ನೇ ತರಗತಿ ಶೇ.46.65 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶೇ.48.71 ಶಾಲೆಗಳು ವಿದ್ಯಾರ್ಥಿಗಳ ಹಾಜರಾತಿಯ ಅಂಕಿ-ಅಂಶಗಳನ್ನು ಅಪ್‌ಲೋಡ್ ಮಾಡಿದ್ದು, ಶೇ.51.29 ಶಾಲೆಗಳು ಅಪ್‌ಲೋಡ್ ಮಾಡಿಲ್ಲ. 9ನೇ ತರಗತಿ ಶೇ.59.62 ಹಾಗೂ 10ನೇ ತರಗತಿ ಶೇ.61.86 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಸೆ.10 ಗಣೇಶ ಹಬ್ಬ ಮತ್ತು 11ರಂದು 2ನೇ ಶನಿವಾರವಾಗಿರುವುದರಿಂದ ಬಹುಶಃ ಸೆ.13ರಂದು ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net