More

    ಬ್ರಹ್ಮಪುತ್ರ ನದಿಯಲ್ಲಿ 100 ಪ್ರಯಾಣಿಕರಿದ್ದ 2 ಬೋಟ್​ಗಳ ನಡುವೆ ಡಿಕ್ಕಿ: ಅನೇಕ ಪ್ರಯಾಣಿಕರು ನಾಪತ್ತೆ

    ದೀಸ್ಪುರ್​: ಸುಮಾರು 100 ಪ್ರಯಾಣಿಕರಿದ್ದ ಎರಡು ಬೋಟ್​ಗಳು ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಅನೇಕ ಪ್ರಯಾಣಿಕರು ಕಾಣೆಯಾಗಿರುವ ಘಟನೆ ಅಸ್ಸಾಂನ ಜೊರ್ಹಾತ್​ನಲ್ಲಿರುವ ಬ್ರಹ್ಮಪುತ್ರ ನದಿಯಲ್ಲಿ ಬುಧವಾರ ನಡೆದಿದೆ.

    ಅಸ್ಸಾಂ ರಾಜಧಾನಿ ಗುವಾಹಟಿಯಿಂದ 350 ಕಿ.ಮೀ ದೂರದಲ್ಲಿರುವ ಜೊರ್ಹಾತ್​ನ ನಿಮತಿ ಘಾಟ್​ನಲ್ಲಿ ಈ ಅವಘಢ ಸಂಭವಿಸಿದೆ. ಎರಡು ಬೋಟ್​ನಲ್ಲಿ 100 ಮಂದಿ ಪ್ರಯಾಣಿಕರಿದ್ದರು. ಎರಡರಲ್ಲಿ ಒಂದು ದೋಣಿ ಒಳನಾಡು ಜಲಸಾರಿಗೆ ಇಲಾಖೆಗೆ ಸೇರಿದ್ದಾಗಿದ್ದು, ಮಜುಲಿಯಿಂದ ನಿಮಾತಿ ಘಾಟ್​ ಕಡೆಗೆ ಬರುತ್ತಿತ್ತು. ಇನ್ನೊಂದು ಬೋಟ್​ ಎದರು ದಿಕ್ಕಿನಿಂದ ಬರುತ್ತಿತ್ತು. ಒಂದಕ್ಕೊಂದು ಡಿಕ್ಕಿಯಾದ ಬಳಿಕ ದೋಣಿ ಮುಳುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಕೆಲವು ಪ್ರಯಾಣಿಕರು ತಮ್ಮನ್ನು ತಾವು ಕಾಪಾಡಿಕೊಳ್ಳಲು ನದಿ ಜಿಗಿದ ದೃಶ್ಯವನ್ನು ಕಾಣಬಹುದಾಗಿದೆ.

    ಬೋಟ್​ನಲ್ಲಿದ್ದ ಪ್ಯಾಸೆಂಜರ್ಸ್​ ಲಗೇಜು, ಮೋಟರ್​ ಬೈಕ್ಸ್​ ಮತ್ತು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​ಡಿಆರ್​ಎಫ್​) ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಮಕ್ಕಳು ಸೇರಿದಂತೆ ಅನೇಕ ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಿಸಲಾಗಿದೆ.

    ಘಟನೆಯ ನಂತರ, ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಅವರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಎಸ್‌ಡಿಆರ್‌ಎಫ್ ನೆರವಿನೊಂದಿಗೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಮಜುಲಿ ಮತ್ತು ಜೋರ್ಹತ್ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್​ ಷಾ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ಅನುಶ್ರೀಗೆ ಮಂಗ್ಳೂರಿನ 14 ಕೋಟಿ, ಬೆಂಗ್ಳೂರಿನ 4 ಕೋಟಿಯ ಮನೆ ಹೇಗೆ ಬಂತು? ಸಂಬರಗಿ ಸ್ಫೋಟಕ ಹೇಳಿಕೆ!

    ಡ್ರಗ್ಸ್​ ಕೇಸ್​ನಲ್ಲಿ ಮತ್ತೆ ಹೆಸರು ಕೇಳಿಬರ್ತಿದ್ದಂತೆ ಅನುಶ್ರೀ ನಾಪತ್ತೆ: ನಿನ್ನೆ ಬೆಳಗ್ಗೆಯೇ ಲಗೇಜ್​ ಸಮೇತ ಎಲ್ಲೋದ್ರು?

    PHOTOS| ನಟಿ ತ್ರಿಶಾ ನಡೆಯನ್ನೇ ಅನುಸರಿಸಿದ ಮಲಯಾಳಂ ಕಿರುತೆರೆ ನಟಿಗೆ ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts