More

    ಕಾಂಗ್ರೆಸ್​ಗೆ ಮತ್ತೆ ಶಾಕ್​: ಅಸ್ಸಾಂನ ಮೂವರು ನಾಯಕರು ಬಿಜೆಪಿ ಸೇರ್ಪಡೆ!

    ಗುವಾಹಟಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ಗೆ ಆಘಾತವಾಗಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಸ್ಸಾಂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಮೂವರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

    ಇದನ್ನೂ ಓದಿ: ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್​ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್​, ಸೆ…ಸಿಡಿಗಳು ವಶಕ್ಕೆ!

    ಈ ಮೂವರ ಪೈಕಿ ಇಬ್ಬರು ಜೋರ್ಹತ್‌ನ ನಾಯಕ ಗೌರವ್ ಗೊಗೊಯ್ ಅವರ ನಿಕಟ ಸಹವರ್ತಿಗಳು. ಮೂರನೆಯವರು ಚರೈಡಿಯೋ ಜಿಲ್ಲಾ ಘಟಕದ ಉನ್ನತ ನಾಯಕ. ಈ ಪೈಕಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಾನಶ್ ಬೋರಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

    ರಾಜ್ಯದ ಕಲ್ಯಾಣಕ್ಕಾಗಿ ಹೊಸ ಅವಕಾಶಗಳು ಮತ್ತು ಮಾರ್ಗಗಳನ್ನು ಅನ್ವೇಷಿಸಲು ನನಗೆ ಸಮಯ ಬಂದಿದೆ ಎಂದು ನಾನು ನಂಬುತ್ತೇನೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರೂ ಆಗಿರುವ ಮನಶ್ ಬೋರಾಹ್ ತಿಳಿಸಿದ್ದಾರೆ.

    ಎಪಿಸಿಸಿ ಕಾರ್ಯದರ್ಶಿ ಗೌರವ್ವ್ ಸೋಮಾನಿ, ರಾಜ್ಯ ಪಕ್ಷದ ಮುಖ್ಯಸ್ಥರಿಗೆ ನೀಡಿದ ರಾಜೀನಾಮೆಯಲ್ಲಿ, ತಮ್ಮ ನಿರ್ಧಾರಕ್ಕೆ ಪ್ರಾಥಮಿಕ ಕಾರಣ ತಿಳಿಸಿದ್ದಾರೆ. ಪ್ರಸ್ತುತವಾಗಿ ಅಸ್ಸಾಂ ಕಾಂಗ್ರೆಸ್‌ನೊಳಗಿನ ಅತೃಪ್ತಿಕರ ನಾಯಕತ್ವ, ಇದು ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗಹರಿಸಲು ವಿಫಲವಾಗಿದೆ.

    ಚರೈಡಿಯೊ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಾಯಕ ಅನುಜ್ ಬರ್ಕಟಕಿ ಕೂಡ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ. ಮನಶ್ ಬೋರಾಹ್ ಮತ್ತು ಅನುಜ್ ಬರ್ಕಟಕಿ ರಾಜ್ಯದ ಮಾಜಿ ಕಾಂಗ್ರೆಸ್ ಸಚಿವರ ಪುತ್ರರಾಗಿದ್ದು, ಸೋಮಾನಿ ಜೊತೆಗೆ ಜೋರ್ಹತ್ ಕ್ಷೇತ್ರದಲ್ಲಿ ಗೊಗೋಯ್ ಅವರ ಪ್ರಚಾರದಲ್ಲಿ ಪ್ರಮುಖ ನಾಯಕರಾಗಿದ್ದರು.

    ಇಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಭಾಬೇಶ್ ಕಲಿತಾ, ಸಂಪುಟ ಸಚಿವರಾದ ಪಿಜುಷ್ ಹಜಾರಿಕಾ ಮತ್ತು ಜಯಂತ ಮಲ್ಲಬರುವಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮನಶ್ ಬೋರಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಾಯಕತ್ವವು ತಮ್ಮನ್ನು ಪಕ್ಷಕ್ಕೆ ಆಕರ್ಷಿಸಿದೆ ಎಂದು ಹೇಳಿದರು.

    ಅಶ್ಲೀಲ ವಿಡಿಯೋ ಚಿತ್ರೀಕರಣ ವೇಳೆ ದಾಳಿ: ಕೇಸ್​ ಬೆನ್ನತ್ತಿದ ಪೊಲೀಸರಿಗೆ ಭಾರೀ ಶಾಕ್​, ಸೆ…ಸಿಡಿಗಳು ವಶಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts