ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು? ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿ ದೇಶದ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ...

DKS
Published on

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ ಶುರು ಮಾಡಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ರ‍್ಯಾಪಿಡ್ ಫೈರ್​ಗೆ ಉತ್ತರಿಸಿದ್ದಾರೆ.

* ಕಾಂಗ್ರೆಸ್: ಭಾರತವನ್ನು ಮೂರು ಪದಗಳಲ್ಲಿ ವಿವರಿಸಿ?

ಡಿಕೆಶಿ: ನನ್ನ ಪ್ರೀತಿಯ ರಾಷ್ಟ್ರ

* ಕಾಂಗ್ರೆಸ್: ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು ಮೂರು ಪದಗಳಲ್ಲಿ ಹೇಳಿ?

ಡಿಕೆಶಿ: ಸಂವಿಧಾನ, ಹಕ್ಕುಗಳು, ಅಹಿಂಸೆ

* ಕಾಂಗ್ರೆಸ್: ಸ್ವಾತಂತ್ರ್ಯ ಭಾರತವನ್ನು ರೂಪಿಸಲು ಕಾರಣವಾಗಿರುವ ಪ್ರಮುಖ 5 ಘಟನೆಗಳು ಯಾವುವು?

ಡಿಕೆಶಿ: - ಮಹಾತ್ಮ ಗಾಂಧಿಯವರ ಹತ್ಯೆ

- ಜವಾಹರಲಾಲ್ ನೆಹರು ಅವರಿಂದ ಭಾಷಾವಾರು ರಾಜ್ಯಗಳ ರಚನೆ

- ಇಂದಿರಾಗಾಂಧಿ ಅವರು ಹಸಿರು ಕ್ರಾಂತಿ

- ಬ್ಯಾಂಕುಗಳ ರಾಷ್ಟ್ರೀಕರಣ

- ರಾಜೀವ್ ಗಾಂಧಿಯವರ ಗಣಕಯಂತ್ರ ಕ್ರಾಂತಿ

-ಸೋನಿಯಾ ಗಾಂಧಿ ಅವರ ನರೇಗಾ ನೀತಿ

* ಕಾಂಗ್ರೆಸ್: ನಿಮ್ಮ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಏನನ್ನು ಧ್ವನಿಸುತ್ತವೆ?

ಡಿಕೆಶಿ: ನಾವು ಒಗ್ಗಟ್ಟಿನಿಂದ ನಿಲ್ಲಬೇಕು

* ಕಾಂಗ್ರೆಸ್: ಭಾರತದ 100ನೇ ವರ್ಷದ ಸ್ವಾತಂತ್ರ್ಯೊತ್ಸವದ ವೇಳೆ ಯಾವ ಮೂರು ವಿಷಯಗಳು ಆಗಿರಲೆಂದು ನೀವು ಆಶಿಸುತ್ತೀರಿ? ಡಿಕೆಶಿ: ನಿರುದ್ಯೋಗ ನಿವಾರಣೆ, ಕೋಮುಗಲಬೆ ನಿವಾರಣೆ, ಮಹಿಳೆಯರಿಗೆ ಸಮಾನತೆ ದೊರೆತಿರಬೇಕು.

Koo App
As India turns 75, here is hoping that India@100 will have ended unemployment, communal violence and gender inequality. Join us in our march towards this goal on August 15 at 2 PM from Sangolli Rayanna Circle. #FreedomMarch
View attached media content
-ಕರ್ನಾಟಕ ಕಾಂಗ್ರೆಸ್ (@inckarnataka)13 Aug 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net