ಅಡವಿಟ್ಟ ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನವೆಂದ ಬ್ಯಾಂಕ್ ಮ್ಯಾನೇಜರ್! ಮಹಿಳೆಯ ಕಣ್ಣೀರು

Bank
Published on

ಹಾಸನ: ಅಡವಿಡುವಾಗ ಅಸಲಿ ಬಂಗಾರವಾಗಿದ್ದ ಮಾಂಗಲ್ಯ ಸರ, ಇದೀಗ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಬಂದಾಗ ನಕಲಿ ಚಿನ್ನ ಎನ್ನುತ್ತಿರುವ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಂಗಲ್ಯ ಸರ ಬಿಡಿಸಿಕೊಳ್ಳಲು ಬಂದ ಚನ್ನರಾಯಪಟ್ಟಣದ ಹಿರೇಹಳ್ಲಿ ಗ್ರಾಮದ ಜಯಮ್ಮ ಎಂಬಾಕೆ ಬ್ಯಾಂಕ್ ಮ್ಯಾನೇಜರ್ ಹೇಳಿದ್ದನ್ನು ಕೇಳಿ ಕಂಗಾಲಾಗಿದ್ದಾಳೆ. ಮಗನ ಕಾಯಿಲೆಗೆಂದು ವರ್ಷದ ಹಿಂದೆ ಜಯಮ್ಮ 30 ಗ್ರಾಂ ಮಾಂಗಲ್ಯದ ಸರವನ್ನು ಒಂದು ಲಕ್ಷದ ಮೂವತ್ತು ಸಾವಿರಕ್ಕೆ ಅಡವಿಟ್ಟಿದ್ದರು. ಇದೀಗ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಬ್ಯಾಂಕ್​ ಮ್ಯಾನೇಜರ್​ ನಕಲಿ ಬಂಗಾರವೆಂದು ಹೇಳಿದ್ದಾನೆ.

ವರ್ಷದ ಹಿಂದೆ ಅಡವಿಟ್ಟಿದ್ದ ಚಿನ್ನ ಅಸಲಿಯಾಗಿತ್ತಾ? ಎಂದು ಪ್ರಶ್ನಿಸಿರುವ ಸ್ಥಳೀಯರು ಬ್ಯಾಂಕ್​ ಮ್ಯಾನೇಜರ್​ ಹೇಳಿಕೆಯಿಂದ ಆಕ್ರೋಶಗೊಂಡು ಬ್ಯಾಂಕ್​ಗೆ ಮುತ್ತಿಗೆ ಹಾಕಿ ಗ್ಲಾಸ್ ಅನ್ನು ಪುಡಿ ಪುಡಿ ಮಾಡಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಉದಯಪುರದಲ್ಲಿರುವ ಹೆಚ್​ಡಿಸಿಸಿ ಬ್ಯಾಂಕ್​ನಲ್ಲಿ ನಡೆದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net