ಪಾರ್ಕ್​ನಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಬಲಿ ಪಡೆದುಕೊಂಡ ತುಂಡಾಗಿ ಬಿದ್ದ ವಿದ್ಯುತ್​ ತಂತಿ

Child
Published on

ಕಲಬುರಗಿ: ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವಿಗೀಡಾಗಿರುವ ಘಟನೆ ಕಲಬುರಗಿಯ ಎನ್​ಜಿಓ ಕಾಲೋನಿಯ ಹನುಮಾನ್ ಮಂದಿರ ಗಾರ್ಡನ್‌ನಲ್ಲಿ ಬುಧವಾರ (ಸೆ.29) ನಡೆದಿದೆ.

ಸಿದ್ದು (6) ವಿದ್ಯುತ್ ತಂತಿ ತಗುಲಿ ಮೃತಪಟ್ಟ ಬಾಲಕ. ಎನ್​ಜಿಓ ಕಾಲೋನಿಯ ಮಹಾದೇವಿ-ಸುರೇಶ್ ದಂಪತಿ ಪುತ್ರ. ಪಾರ್ಕ್​ನಲ್ಲಿ ಹೈಮಾಸ್ಕ್ ದೀಪದ ವಿದ್ಯುತ್ ವೈರ್​ ತುಂಡಾಗಿ ಬಿದ್ದಿತ್ತು. ಆಟವಾಡುತ್ತಾ ಹೋಗಿ ವಿದ್ಯುತ್ ವೈರ್ ತುಳಿದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವಿಗೆ ಜೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದೆ. ಘಟನೆ ಸಂಬಂಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net