

ಬೆಂಗಳೂರು: ಬೆಂಗಳೂರು ಥಿಯೇಟರ್ ಫೌಂಡೇಶನ್ ಹಾಗೂ ವಿದ್ಯಾರ್ಥಿ ಭವನ ಹೋಟೆಲ್ ಸಹಯೋಗದಲ್ಲಿ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ.6ರಿಂದ ಮೇ.8ರವರೆಗೆ ವಿದ್ಯಾರ್ಥಿ ಭವನ ನಾಟಕ ಪ್ರದರ್ಶನ ನಡೆಯಲಿದೆ ಎಂದು ವಿದ್ಯಾರ್ಥಿ ಭವನ ಹೋಟೆಲ್ ಮಾಲೀಕ ಅರುಣ್ ಅಡಿಗ ಹೇಳಿದ್ದಾರೆ.
ಕಳೆದ 79 ವರ್ಷಗಳಿಂದ ನಾಡಿನ ಜನರಿಗೆ ರುಚಿಯಾಗಿ ದೋಸೆ ಉಣಬಡಿಸುತ್ತಾ ಮನೆ ಮಾತಾಗಿದ್ದು, ಈ ಅವಧಿಯಲ್ಲಿ ಪ್ರಸಿದ್ದ ಕವಿಗಳು ಈ ಹೋಟೆಲ್‌ಗೆ ಬಂದು ಹೋಗಿದ್ದಾರೆ. ನೂರಾರು ಕಥೆಗಳನ್ನು ಅಡಗಿದ್ದು, ಅವುಗಳನ್ನು ಯುವ ಪೀಳಿಗೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವ್ಯಾಪಾರ ಜತೆಗೆ ಬೇರೆ ರೀತಿಯಲ್ಲಿ ಜನರನ್ನು ಮುಟ್ಟಲು ಈ ವಿನೂತನ ಪ್ರಯತ್ನ ಮಾಡಲಾಗಿದೆ. ಬೆಂಗಳೂರು ಥಿಯೇಟರ್ ಫೌಂಡೇಶನ್ ಸಂಸ್ಥೆಯ ಕಲಾವಿದರಾದ ಸಿಹಿಕಹಿ ಚಂದ್ರು, ಸುಂದರ್ ವೀಣಾ, ರಘುನಂದನ್ ಸೇರಿ ಇನ್ನಿತತರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಗಾಂಧಿ ಬಜಾರ್‌ನ ವಿದ್ಯಾರ್ಥಿ ಭವನ ಹೋಟೆಲ್ ಮಲ್ಲೇಶ್ವರಗೆ ಸ್ಥಳಾಂತರಗೊಳ್ಳಲಿದೆ ಎಂದು ಸುದ್ದಿ ಹರಡಿತು. ಇದು ಸುಳ್ಳು. ನಾಟಕ ರೂಪದಲ್ಲಿ ಮಾತ್ರ ಬರಲಿದೆ ಎಂದು ಸ್ಪಷ್ಟಪಡಿಸಿದರು.