More

    21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

    ಹೈದರಾಬಾದ್​: ತೆಲಂಗಾಣದ ಯುವತಿಯೊಬ್ಬಳು ಬಹುರಾಷ್ಟ್ರೀಯ ಇ ಕಾಮರ್ಸ್​ ಕಂಪನಿ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

    21 ವರ್ಷದ ಭಾವನಾ ರೆಡ್ಡಿ ಬನಾಲಾ ಹೈದರಾಬಾದ್​ನ ಒಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರೆ. ಅಮೇಜಾನ್​ ಲಂಡನ್​ನಿಂದ ವಾರ್ಷಿಕ 40 ಲಕ್ಷ ರೂ. ಸಂಬಳದ ಉದ್ಯೋಗದ ಆಫರ್​ ಅನ್ನು ಪಡೆದುಕೊಂಡಿದ್ದಾರೆ. ತೆಲಂಗಾಣದ ಮನುಗುರು ಪಟ್ಟಣದ ಎಡುಲ್ಲಾ ಬಯ್ಯರಾಮ್​ ಹೆಸರಿನ ಸಣ್ಣ ಗ್ರಾಮವೊಂದರ ನಿವಾಸಿಯಾಗಿರುವ ಭಾವನಾ ಇಂದ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿರುವುದು ಅಮೋಘ ಸಾಧನೆಯೇ ಸರಿ.

    ಅಮೇಜಾನ್​ ಲಂಡನ್​ನ ಬಿಜಿನೆಸ್​ ವಿಶ್ಲೇಷಕಿಯಾಗಿ ಭಾವನಾ ನೇಮಕವಾಗಿದ್ದಾರೆ. ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನವನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಭಾವನಾ ತಮ್ಮ ಕನಸಿನ ಉದ್ಯೋಗವನ್ನು ನನಸು ಮಾಡಿಕೊಂಡಿದ್ದಾರೆ. ದೊಡ್ಡ ಕಂಪನಿಯಲ್ಲಿ ಉದ್ಯೋಗ ಪಡೆಯುವುದು ನನ್ನ ಕನಸಾಗಿದ್ದು, ಅದು ಇಷ್ಟು ಬೇಗ ನನಸಾಗಲಿದೆ ಎಂದು ನಾನು ಊಹಿಸಿರಲಿಲ್ಲ ಅಂತಾ ಭಾವನಾ ಹೇಳಿದ್ದಾರೆ.

    ಕೆಲಸ ಹೇಗೆ ಸಿಕ್ಕಿತು ಎಂಬುದರ ಕುರಿತು ಮಾತನಾಡಿದ ಭಾವನಾ, ನಾನು ಅನೇಕ ಆನ್‌ಲೈನ್ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಪ್ರಯತ್ನಿಸಿದ್ದೇನೆ. ನಾನು ಮೂರು ಬಾರಿ ತಿರಸ್ಕರಿಸಲ್ಪಟ್ಟಿದ್ದೇನೆ ಮತ್ತು ಅಂತಿಮವಾಗಿ ನಾಲ್ಕನೇ ಪ್ರಯತ್ನದಲ್ಲಿ ಆಯ್ಕೆಯಾದೆ ಎಂದು ಹೇಳಿದ್ದಾರೆ.

    ನೀವು ಎಲ್ಲಿಂದ ಬಂದಿದ್ದೀರಿ, ನೀವು ಯಾವ ವಿಶ್ವವಿದ್ಯಾಲಯದಲ್ಲಿ ಓದಿದ್ದೀರಿ ಅಥವಾ ಎಷ್ಟು ಅಂಕಗಳನ್ನು ಗಳಿಸಿದ್ದೀರಿ ಎಂಬುದು ಇಲ್ಲಿ ಮುಖ್ಯವಲ್ಲ, ನಿಮ್ಮ ಪ್ರತಿಭೆ ಮತ್ತು ಕೌಶಲ್ಯ ಮಾತ್ರ ಮುಖ್ಯ. ನಿಮ್ಮಲ್ಲಿ ಸಾಕಷ್ಟು ಕೌಶಲ್ಯವಿದ್ದರೆ, ನಿಮಗೆ ಬೇಕಾದುದನ್ನು ನೀವು ಪಡೆಯಬಹುದು ಎಂದು ಭಾವನಾ ಹೇಳಿದರು. (ಏಜೆನ್ಸೀಸ್​)

    ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts