More

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಕಲಬುರಗಿ: ರಾಜ್ಯದಲ್ಲಿ 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪಿಎಸ್​ಐ ಪರೀಕ್ಷೆಯ ಅಕ್ರಮಗಳು ಬಗೆದಷ್ಟು ಹೊರ ಬರುತ್ತಿವೆ.

    ಮತ್ತೊಂದು ರೀತಿಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದಿರುವ ಗ್ಯಾಂಗ್ ಪತ್ತೆ ಸಿಐಡಿ ತನಿಖೆಯಿಂದ ಬಯಲಾಗಿದೆ. ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದ ಸ್ಟೈಲ್​ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್​ ಬಳಸಿ ಅನೇಕ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ಸಂಗತಿ ಬಯಲಾಗಿದೆ.

    ನಿನ್ನೆ (ಏ.21) ಬಂಧನವಾಗಿರುವ ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಕೂಡ ಮುನ್ನಾಬಾಯಿ ಎಂಬಿಬಿಎಸ್ ಸ್ಟೈಲಲ್ಲಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಎದುರಿಸಿದ್ದಾರೆ. ಇದೇ ರೀತಿ ಅನೇಕರು ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ.

    ಇನ್ನು ಈ ಅಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಕಿಂಗ್ ಪಿನ್ ಆಗಿರುವ ಶಂಕೆಯಿದೆ. ಬಂಧಿತ ಹಯ್ಯಾಳಿ ದೇಸಾಯಿ ನೀಡಿರೋ ಮಾಹಿತಿ ಮೇರೆಗೆ ಆತನ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ. ಈಗಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೂರಾರು ಜನರಿಗೆ ಕಿಂಗ್​ಪಿನ್​ ನೌಕರಿ ಕೊಡಿಸಿರುವ ಸಂಗತಿಯನ್ನು ಹಯ್ಯಾಳಿ ದೇಸಾಯಿ ಬಿಚ್ಚಿಟ್ಟಿದ್ದಾನೆ.

    ಆರೋಪಿತ ಕಿಂಗ್​ಪಿನ್​ ಕಲಬುರಗಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಭಾರೀ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆತನ ಬಂಧನಕ್ಕಾಗಿ ಸಿಐಡಿ ತಂಡ ಸಾಕಷ್ಟು ಮಾಹಿತಿ ಕಲೆಹಾಕುತ್ತಿದೆ. (ದಿಗ್ವಿಜಯ ನ್ಯೂಸ್​)

    ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ಕೇಸ್​: ಮತ್ತಿಬ್ಬರು ಪೊಲೀಸರ ಬಂಧನ, ಇಂಜಿನಿಯರ್ ಮನೆ ಮೇಲೆ ದಾಳಿ

    ಲವರ್​ ಜತೆ ತಂಗಿ ಬೈಕ್​ನಲ್ಲಿ ಹೋಗುವುದನ್ನು ನೋಡಿದ ಅಣ್ಣ: ಮುಂದಾಗಿದ್ದೇನು? ಇಲ್ಲಿದೆ ಭಯಾನಕ ದೃಶ್ಯ

    ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts