ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ

ವಿಜಯನಗರ: ಅಪಾರ ಪ್ರಮಾಣದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆಯ ಹೊರವಲಯದಲ್ಲಿ ಪತ್ತೆಯಾಗಿವೆ. ಲಕ್ಷಾಂತರ ಮೌಲ್ಯದ ಮಾತ್ರೆಗಳು ಎಂದು ಅಂದಾಜಿಸಲಾಗಿದೆ. ಸಂಡೂರು ರಸ್ತೆಯ LFS ಶಾಲೆ ಬಳಿ ಅವಧಿ ಮೀರಿದ ಮಾತ್ರೆಗಳು ಪತ್ತೆಯಾಗಿವೆ. ಗರ್ಭಿಣಿಯರು, ಬಾಣಂತಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಮಾತ್ರೆಗಳಾಗಿದ್ದು, ಈ ಘಟನೆ ಸರ್ಕಾರದ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳಿಗೆ ಹೊರಗಡೆ ಚೀಟಿ ಬರೆದು ಕೊಡಲಾಗುತ್ತಿದೆ. ಅದರ ಬದಲು ಈ ಔಷಧಿಗಳನ್ನು ಬಡವರಿಗೆ ನೀಡಿದ್ದರೆ, ಎಷ್ಟೋ ಅನುಕೂಲವಾಗುತ್ತಿತ್ತು. ಇದೀಗ ಅವಧಿ ಮೀರಿರುವುದರಿಂದ ಎಲ್ಲವನ್ನು … Continue reading ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ