More

    ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ

    ವಿಜಯನಗರ: ಅಪಾರ ಪ್ರಮಾಣದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆಯ ಹೊರವಲಯದಲ್ಲಿ ಪತ್ತೆಯಾಗಿವೆ. ಲಕ್ಷಾಂತರ ಮೌಲ್ಯದ ಮಾತ್ರೆಗಳು ಎಂದು ಅಂದಾಜಿಸಲಾಗಿದೆ.

    ಸಂಡೂರು ರಸ್ತೆಯ LFS ಶಾಲೆ ಬಳಿ ಅವಧಿ ಮೀರಿದ ಮಾತ್ರೆಗಳು ಪತ್ತೆಯಾಗಿವೆ. ಗರ್ಭಿಣಿಯರು, ಬಾಣಂತಿಯರು ಮತ್ತು ಅಪೌಷ್ಟಿಕತೆಯಿಂದ ಬಳಲುವವರಿಗೆ ನೀಡುವ ಮಾತ್ರೆಗಳಾಗಿದ್ದು, ಈ ಘಟನೆ ಸರ್ಕಾರದ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳಿಗೆ ಹೊರಗಡೆ ಚೀಟಿ ಬರೆದು ಕೊಡಲಾಗುತ್ತಿದೆ. ಅದರ ಬದಲು ಈ ಔಷಧಿಗಳನ್ನು ಬಡವರಿಗೆ ನೀಡಿದ್ದರೆ, ಎಷ್ಟೋ ಅನುಕೂಲವಾಗುತ್ತಿತ್ತು. ಇದೀಗ ಅವಧಿ ಮೀರಿರುವುದರಿಂದ ಎಲ್ಲವನ್ನು ಹೊರಗಡೆ ತಂದು ಚೆಲ್ಲಲಾಗಿದೆ. ಸರ್ಕಾರಿ ಆಸ್ಪತ್ರೆಗಳ ದುರಾಡಳಿತ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಈ ಘಟನೆ ಕಾರಣವಾಗಿದೆ.

    ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆರೋಗ್ಯ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಚಾಕೊಲೇಟ್​ ಕೊಡಿಸೋ ನೆಪದಲ್ಲಿ ಮಗುವನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ  

    ಮೇ 16ರಂದು ಶಾಲೆಗಳು ಪುನಾರಂಭ; 2022-23ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts