

ಹಾಸನ: ನನ್ನ ಮಗ ಮಂತರ್ ಗೌಡನಿಗೆ ಬಿಜೆಪಿಯಿಂದನೇ ಹಾಸನಕ್ಕೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಸಿಗಬೇಕಿತ್ತು. ಆದರೆ, ಅದು ಹೇಗೆ ತಪ್ಪಿ ಹೋಯ್ತು ಅಂತಾ ಸಮಯ ಬಂದಾಗ ಹೇಳ್ತಿನಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎ. ಮಂಜು ಹೇಳಿದರು,
ಅಪ್ಪ ಬಿಜೆಪಿ, ಮಗ ಕೊಡಗು ಕಾಂಗ್ರೆಸ್ ಎಂಎಲ್ಸಿ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಮಂಜು, ಅಪ್ಪ ಬಿಜೆಪಿ ,ಮಗ ಕಾಂಗ್ರೆಸ್ ಹೇಗೆ ಅನ್ನೊ ಭಾವನೆ ಇದೆ. ಸೋನಿಯಾ ಗಾಂಧಿ, ಮೇನಕಾ ಗಾಂಧಿ ಕಾಂಗ್ರೆಸ್-ಬಿಜೆಪಿ ಬೇರೆ ಬೇರೆ ಪಕ್ಷದಲ್ಲಿಲ್ವ? ಈಗ ದೇವೇಗೌಡರ ಕುಟುಂಬದವರು ಜನತಾದಳ ಅಂತ ಇದ್ದಾರಷ್ಟೆ. ಅವರು ಎಲ್ಲಾ ಪಾರ್ಟಿಯಲ್ಲೂ ಇದ್ದಾರೆ. ಇಲ್ಲಿ ಒಳ ಒಪ್ಪಂದದ ಚುನಾವಣೆ ಮಾಡ್ತಾರೆ. ಆದರೆ, ನಾನು ಅವರಥರ ಅಲ್ಲ ಎಂದರು.
ಸಿದ್ದರಾಮಯ್ಯ ಭೇಟಿ ವಿಚಾರವಾಗಿ ಮಾತನಾಡಿದ ಅವರು ಆರೋಗ್ಯ ಕೆಟ್ಟ ಸಮಯದಲ್ಲಿ ಅವರು ಭೇಟಿ ಮಾಡಿದ್ದಾರಷ್ಟೇ. ವಿಶ್ವಾಸದಲ್ಲಿ ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ, ರೇವಣ್ಣ ಎಲ್ಲಾ ಮಾತನಾಡಿಸಿದ್ದಾರೆ. ಅದು ಮುಖ್ಯ ಅಲ್ಲ. ಇದು ಮಾಧ್ಯಮದಲ್ಲಿ ಸೃಷ್ಟಿ ಎಂದರು.
ಗ್ರಾಮ ಪಂಚಾಯತಿ ನಿಂತು ಗೆದ್ದು ಬಾರದವರನ್ನ ನಮ್ಮ ಜಿಲ್ಲೆಯ ಪ್ರಜ್ಞಾವಂತ ಮತದಾರರು ತಿರಸ್ಕಾರ ಮಾಡ್ತಾರೆ. ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ವಿರುದ್ಧ ದೇವೇಗೌಡರ ಕುಟುಂಬ ಒಳ ಒಪ್ಪಂದದ ರಾಜಕೀಯ ಮಾಡ್ತಾರೆ ಎಂದು ಟೀಕಿಸಿದರು. (ದಿಗ್ವಿಜಯ ನ್ಯೂಸ್)