ಇಬ್ಬರು ಅನಾಥ ಬಾಲಕಿಯರಿಗೆ ಆಮಿಷವೊಡ್ಡಿ ಮದುವೆ: ಆರೋಪಿಗಳ ಹಿಂದೆ ಬಿದ್ದ ದಾವಣಗೆರೆ ಪೊಲೀಸ್​!

Child Marriage
Published on

ದಾವಣಗೆರೆ: ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದ ಐದು ಮಕ್ಕಳಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಆಮಿಷವೊಡ್ಡಿ ಮದುವೆಯಾಗಿರುವ ಘಟನೆ ಬೆಳಕಿ ದಾವಣಗೆರೆ ನಗರದ ಹೊಸ ಕುಂದವಾಡದಲ್ಲಿ ಬೆಳಕಿಗೆ ಬಂದಿದೆ.

ಅನಾಥ ಮಕ್ಕಳು‌ ಹೊಸಕುಂದವಾಡ ನಿವಾಸಿಗಳು. 2 ವರ್ಷಗಳ ಹಿಂದೆ ತಂದೆ ಮೃತಪಟ್ಟಿದ್ದರು. ಮಹಾಮಾರಿ ಕರೊನಾ ಸೋಂಕಿನಿಂದ ಐದು ತಿಂಗಳ ಹಿಂದೆ ತಾಯಿ ನಿಧನರಾಗಿದ್ದರು. ತಂದೆ-ತಾಯಿಯನ್ನು ಕಳೆದುಕೊಂಡು 4 ಹೆಣ್ಣು, 1 ಗಂಡು ಮಗು ಅನಾಥವಾಗಿದ್ದಾರೆ.

ಮನೆ ಸಮೀಪದಲ್ಲಿದ್ದ ವ್ಯಕ್ತಿಯೋರ್ವ 15 ವರ್ಷದ ದೊಡ್ಡ ಮಗಳನ್ನು ಮೂರು ತಿಂಗಳ ಹಿಂದೆಯೇ ಮದುವೆಯಾಗಿದ್ದಾನೆ. ಅದೇ ಏರಿಯಾದ ಇನ್ನೊಬ್ಬ ವ್ಯಕ್ತಿ 3 ದಿನಗಳ ಹಿಂದೆ 13 ವರ್ಷದ ಬಾಲಕಿಯನ್ನು ಮದುವೆಯಾಗಿದ್ದಾನೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕೈಗೆ 13 ವರ್ಷದ ಬಾಲಕಿಯನ್ನು ಮದುವೆಯಾದ ವ್ಯಕ್ತಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ.

ಇನ್ನು ವಿಚಾರಣೆ ನಡೆಸುತ್ತಿದ್ದ ವೇಳೆಯೇ ಆರೋಪಿ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಐದೂ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.‌ ವಿಜಯಕುಮಾರ್ ವಶಕ್ಕೆ ಪಡೆದಿದ್ದು, ಮಕ್ಕಳನ್ನು ಜಿಲ್ಲಾ ಬಾಲಕಿಯರ ಮಂದಿರದ ಸುಪರ್ದಿಗೆ ಒಪ್ಪಿಸಿದ್ದಾರೆ.

ಮದುವೆಯಾದ ಇಬ್ಬರು ವ್ಯಕ್ತಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net