More

    ಕಾಲುವೆ​ಗೆ ಗುದ್ದಿದ ಹೊಡೆತಕ್ಕೆ ಎರಡು ಪೀಸ್​ ಆದ ಕಾರು! ಹಿಂದೆ ಕುಳಿತಿದ್ದ ಮೂವರೂ ಬಲಿ

    ಭೋಪಾಲ್: ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುತ್ತಿದ್ದವರು ರಸ್ತೆ ಮಧ್ಯೆಯೇ ಅಪಘಾತಕ್ಕೀಡಾಗಿ, ಹೆಣವಾಗಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರದ ರಾಮ್​ಕೋನಾ ಬಳಿ ನಡೆದಿದೆ. ಕಾಲುವೆ​ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಎರಡು ಪೀಸ್​ ಆಗಿದೆ ಎನ್ನಲಾಗಿದೆ.

    ಸೌನ್ಸಾರ್ ನಿವಾಸಿ ಸಚಿನ್ ಜೈಸ್ವಾಲ್ ತಮ್ಮ ಕುಟುಂಬದೊಂದಿಗೆ ರಾಮ್​ಕೋನಾಕ್ಕೆ ಮದುವೆಗೆಂದು ತೆರಳಿದ್ದರು. ಮದುವೆ ಮುಗಿಸಿದ ಕುಟುಂಬ ಶುಕ್ರವಾರ ತಮ್ಮ ಊರಿಗೆ ವಾಪಾಸು ಬರಲು ಹೊರಟಿದೆ. ರಸ್ತೆ ಮೇಲೆ ಬರುತ್ತಿರುವಾಗ ಬೈಕ್​ ಸವಾರನೊಬ್ಬ ಅಡ್ಡ ಬಂದ ಎನ್ನುವ ಕಾರಣಕ್ಕೆ ಆತನನ್ನು ರಕ್ಷಿಸುವ ಸಲುವಾಗಿ ಸಚಿನ್​ ಕಾರನ್ನು ಸೈಡ್​ಗೆ ಎಳೆದಿದ್ದಾರೆ. ಆಗ ಬ್ಯಾಲೆನ್ಸ್​ ತಪ್ಪಿದ ಕಾರು ಸೀದಾ ಕಾಲುವೆಗೆ ಹೋಗಿ ಡಿಕ್ಕಿ ಹೊಡೆದಿದೆ. ಕಾರು ಎರಡು ಭಾಗವಾಗಿ ಹೋಗಿದೆ.

    ಕಾರಿನ ಹಿಂಬದಿಯಲ್ಲಿ ಮೂವರು ಮಹಿಳೆಯರು ಕುಳಿತಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಚಾಲಕನ ಸೀಟ್​ನಲ್ಲಿದ್ದ ಸಚಿನ್​ ಮತ್ತು ಆತನ ಪಕ್ಕದ ಸೀಟಿನಲ್ಲಿದ್ದ ಇನ್ನೋರ್ವ ಗಂಡಸು ಗಂಭೀರ ಗಾಯಾಳುಗಳಾಗಿದ್ದಾರೆ. ಅವರಿಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್)

    ಜೋರಾಯ್ತು ಮುಂಗಾರು: ಜೂನ್​ 14ರಿಂದ ಮತ್ತಷ್ಟು ಹೆಚ್ಚಲಿದೆ ಮಳೆ, ಹಲವು ಜಿಲ್ಲೆಗಳಿಗೆ ಅಲರ್ಟ್​ ಘೋಷಣೆ

    ಗಂಡನನ್ನು ಕೊಂದು ಆತನ ಮರ್ಮಾಂಗ ಫ್ರೈ ಮಾಡಿದ ಹೆಂಡತಿ! ಮಹಿಳೆಯ ಹುಚ್ಚಾಟ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ

    ಮಗ ಮದುವೆಯಾಗಿಲ್ಲವೆಂದು ತುಂಡು ತುಂಡಾಗಿ ಕತ್ತರಿಸಿ ಎಸೆದ ಅಪ್ಪ ಅಮ್ಮ! ಮಗಳು, ಅಳಿಯನನ್ನೂ ಹಾಗೇ ಕೊಂದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts