

ಧಾರವಾಡ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಗುಂಪುಗೂಡಿ ಕ್ರಿಕೆಟ್ ಆಡಿದ್ದಲ್ಲದೆ, ಪ್ರಶ್ನಿಸಿದ ಪಿಡಿಒ ಮೇಲೆಯೇ ಯುವಕನೊಬ್ಬ ಹಲ್ಲೇ ಮಾಡಿರುವ ಘಟನೆ ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಯುವಕ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ್ಯುಂಜಯ ಮೆಣಸಿನಕಾಯಿ ಹಲ್ಲೆಗೊಳಗಾದ ಪಿಡಿಒ. ಗ್ರಾಮದ ಮೈದಾನದಲ್ಲಿ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಿಡಿಒ ಲಾಕ್‌ಡೌನ್ ಹಿನ್ನೆಲೆ ಕ್ರಿಕೆಟ್ ಆಡಬೇಡಿ ಎಂದು ಹೇಳಿದರು.
ಕ್ರಿಕೆಟ್ ಆಡುವುದನ್ನು ತಡೆದ ಕಾರಣಕ್ಕೆ ಕೋಪಗೊಂಡ ಯುವಕನೊಬ್ಬ ನಿಂತ ಜಾಗದಲ್ಲೇ ಹಲ್ಲೆ ಮಾಡಿದ್ದಾರೆ. ಅಲ್ಲದೆ, ಅವ್ಯಾಚ್ಚ ಶಬ್ದಗಳಿಂದಲೂ ನಿಂದಿಸಿರುವ ಆರೋಪ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್)