More

    ಬ್ರಿಟನ್​ಗೆ ತೆರಳಲು ಮಗನಿಗೆ ವೀಸಾ ಕೇಳಿದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ ಸಿದ್ಧತೆ ದೃಷ್ಟಿಯಿಂದ ಹಲವು ಟೂರ್ನಿಗಳಲ್ಲಿ ಸ್ಪರ್ಧಿಸುವ ಸಲುವಾಗಿ ಭಾರತದ ಸ್ಟಾರ್​ ಟೆನಿಸ್​ ಪಟು ಸಾನಿಯಾ ಮಿರ್ಜಾ ಶೀಘ್ರವೇ ಬ್ರಿಟನ್​ಗೆ ತೆರಳಲಿದ್ದಾರೆ. ಈ ವೇಳೆಗೆ ಸಾನಿಯಾ ಮಿರ್ಜಾ ಅವರ ಎರಡು ವರ್ಷದ ಪುತ್ರನನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸಾನಿಯಾ ಪುತ್ರನಿಗೆ ಬ್ರಿಟನ್​ ಸರ್ಕಾರದಿಂದ ವೀಸಾ ಕೊಡಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯವೂ ವಿದೇಶಾಂಗ ಸಚಿವಾಲಯದ ಮೊರೆ ಹೋಗಿದೆ. ಜೂನ್​ ತಿಂಗಳಲ್ಲಿ ಸಾನಿಯಾ ಮಿರ್ಜಾ 4 ಟೂನಿರ್ಗಳಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ವೆಸ್ಟ್​ ಇಂಡೀಸ್​ ತಂಡಕ್ಕೆ ಕ್ರಿಸ್​ ಗೇಲ್​, ಆಂಡ್ರೆ ರಸೆಲ್​, ಹೆಟ್ಮೆಯರ್​ ವಾಪಸ್​…, 

    ಜೂನ್​ 6 ರಿಂದ ನಾಟಿಂಗ್​ಹ್ಯಾಂ ಓಪನ್​, ಜೂನ್​ 14 ರಿಂದ ರ್ಬಮಿಂಗ್​ಹ್ಯಾಂ ಓಪನ್​, ಜೂನ್​ 20 ರಿಂದ ಈಸ್ಟ್​ಬೌರ್ನೆ ಓಪನ್​ ಹಾಗೂ ಜೂನ್​ 28 ರಿಂದ ವಿಂಬಲ್ಡನ್​ ಗ್ರಾಂಡ್​ ಸ್ಲಾಂ ಟೆನಿಸ್​ ಟೂರ್ನಿಗಳಲ್ಲಿ ಸಾನಿಯಾ ಮಿರ್ಜಾ ಸ್ಪರ್ಧಿಸಲಿದ್ದಾರೆ. ಸಾನಿಯಾ ಮಿರ್ಜಾಗೆ ನಾಟಿಂಗ್​ಹ್ಯಾಂಗೆ ತೆರಳಲು ವೀಸಾ ಲಭಿಸಿದೆ. ಅದರೆ, ಸಾನಿಯಾ ಪುತ್ರ ಹಾಗೂ ಅವನ ಉಸ್ತುವಾರಿ ವಹಿಸಿಕೊಳ್ಳುವವರಿಗೆ ವೀಸಾ ದಕ್ಕಿಲ್ಲ. ಭಾರತದ ಪ್ರವಾಸಿಗರಿಗೆ ಇಂಗ್ಲೆಂಡ್​ನಲ್ಲಿ ನಿರ್ಬಂಧ ವಿಧಿಸಿರುವುದೇ ಇದಕ್ಕೆ ಕಾರಣ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್​) ತಿಳಿಸಿದೆ. ಸಾನಿಯಾ ಮಿರ್ಜಾ ಕೂಡ ಕ್ರೀಡಾ ಸಚಿವಾಲಯದ ಟಾರ್ಗೆಟ್​ ಒಲಿಂಪಿಕ್​ ಪೋಡಿಯಂ ಯೋಜನೆಯ (ಟಾಪ್ಸ್​) ಭಾಗವಾಗಿದ್ದಾರೆ. ಮಗ ಹಾಗೂ ಮಗನ ಉಸ್ತುವಾರಿ ವಹಿಸುವವರಿಗೆ ವೀಸಾ ನೀಡುವಂತೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ನಿಂದ ವೇಗಿ ಪ್ರಸಿದ್ಧ ಕೃಷ್ಣ ಗುಣಮುಖ, ಇಂಗ್ಲೆಂಡ್​ ಪ್ರವಾಸಕ್ಕೆ ಲಭ್ಯ

    ಈ ಕುರಿತು ಪ್ರತಿಕ್ರಿಯಿಸಿರುವ ಕ್ರೀಡಾ ಸಚಿವ ಕಿರಣ್​ ರಿಜಿಜು, ಸಾನಿಯಾ ಮಿರ್ಜಾ ಮನವಿಯನ್ನು ಸ್ವೀಕರಿಸಿದ್ದು, ತಾಯಿಯೊಂದಿಗೆ ಮಗು ಬ್ರಿಟನ್​ಗೆ ತೆರಳಬೇಕು ಎಂಬುದೇ ನಮ್ಮ ಆಶಯ. ಸಾನಿಯಾ ಅಲ್ಲಿ ಉತ್ತಮವಾಗಿ ಆಡಬೇಕೆಂದರೆ ಮಗನ ಉಪಸ್ಥಿತಿ ಅತ್ಯಗತ್ಯ. ಈ ಕುರಿತು ವಿದೇಶಾಂಗ ಸಚಿವಾಯಲದ ಮುಖಾಂತರ ಬ್ರಿಟನ್​ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಸಚಿವರು ತಿಳಿಸಿದರು.

    ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts