

ಸೇಂಟ್ ಜಾನ್ಸ್ (ಅಂಟಿಗುವಾ): ಚುಟುಕು ಕ್ರಿಕೆಟ್ನ ಸ್ಟಾರ್ ಆಟಗಾರರಾದ ಆಂಡ್ರೆ ರಸೆಲ್, ಕ್ರಿಸ್ ಗೇಲ್ ಹಾಗೂ ಶಿಮ್ರೋನ್ ಹೆಟ್ಮೆಯರ್ ತವರಿನಲ್ಲಿ ನಡೆಯಲಿರುವ 5 ಪಂದ್ಯಗಳ 3 ಟಿ20 ಸರಣಿಗಳಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ತಂಡ ತವರಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೆಲಿಯಾ ಹಾಗು ಪಾಕಿಸ್ತಾನ ತಂಡಗಳನ್ನು ಎದುರಿಸಲಿದೆ. ರಸೆಲ್ ಹಾಗೂ ಹೆಟ್ಮೆಯರ್ 2020ರಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದರೆ, ಕ್ರಿಸ್ ಗೇಲ್ ಕಳೆದ ಮಾರ್ಚ್ನಲ್ಲಿ ಶ್ರೀಲಂಕಾ ಎದುರು ಆಡಿದ್ದರು.
ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಅನುಭವಿ ಹಾಗೂ ಹೆಚ್ಚು ಯುವ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಜೂನ್ 26 ರಿಂದ ಜುಲೈ 3 ರವರೆಗೆ ಗ್ರೇನಡಾ ರಾಷ್ಟ್ರೀಯ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿ ನಡೆದರೆ, ಇದಕ್ಕೂ ಮೊದಲು ಸೇಂಟ್ ಲೂಸಿಯಾದಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: VIDEO: ರಾಬಿನ್ ಉತ್ತಪ್ಪ ಡ್ಯಾನ್ಸ್ ವಿಡಿಯೋ ವೈರಲ್..!
ಬಳಿಕ ಜುಲೈ 9 ರಿಂದ 16 ರವರೆಗೆ ಸೇಂಟ್ ಲೂಸಿಯಾದಲ್ಲಿ ಆಸ್ಟ್ರೆಲಿಯಾ ಎದುರು 5 ಪಂದ್ಯಗಳ ಟಿ20 ಸರಣಿ ನಡೆದರೆ, ಬಳಿಕ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಂತರ ಜುಲೈ 27 ರಿಂದ ಆಗಸ್ಟ್ 3 ರವರೆಗೆ ಪಾಕಿಸ್ತಾನ ಎದುರು ಚುಟುಕು ಕ್ರಿಕೆಟ್ ಸರಣಿ, ಜಮೈಕಾದಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ವೆಸ್ಟ್ ಇಂಡೀಸ್ ತಂಡ ತವರಿನಲ್ಲಿ ಎರಡು ತಿಂಗಳ ಅಂತರದಲ್ಲಿ 4 ಟೆಸ್ಟ್, 3 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಲಿದೆ.
ತಂಡ: ಕೈರಾನ್ ಪೊಲ್ಲಾರ್ಡ್ (ನಾಯಕ), ನಿಕೋಲಸ್ ಪೂರನ್, ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೊ, ಶೇಲ್ಡನ್ ಕಾಟ್ರೆಲ್, ಫಿಡೆಲ್ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರೋನ್ ಹೆಟ್ಮೆಯರ್, ಜೇನಸ್ ಹೋಲ್ಡರ್, ಅಕೀಲ್ ಹೊಸಿನ್, ಎವಿನ್ ಲೆವಿಸ್, ಒಬೆಕ್ ಮೆಕೊ, ಆಂಡ್ರೆ ರಸೆಲ್, ಲಿಂಡ್ಲೆ ಸಿಮ್ಮನ್ಸ್, ಕೆವಿನ್ ಸಿನ್ಕ್ಲೈರ್, ಒಶಾನೆ ಥಾಮಸ್, ಹೇಡೆನನ್ ವಾಲ್ಷ್ ಜೂನಿಯರ್.