More

    ಕೋವಿಡ್​ನಿಂದ ವೇಗಿ ಪ್ರಸಿದ್ಧ ಕೃಷ್ಣ ಗುಣಮುಖ, ಇಂಗ್ಲೆಂಡ್​ ಪ್ರವಾಸಕ್ಕೆ ಲಭ್ಯ

    ನವದೆಹಲಿ: ಮುಂಬರುವ ಇಂಗ್ಲೆಂಡ್​ ಪ್ರವಾಸಕ್ಕೆ ಮೀಸಲು ಆಟಗಾರನಾಗಿ ಆಯ್ಕೆಯಾಗಿರುವ ಕರ್ನಾಟಕದ ವೇಗದ ಬೌಲರ್​ ಪ್ರಸಿದ್ಧ ಕೃಷ್ಣ ಹಾಗೂ ಅನುಭವಿ ಸ್ಪಿನ್ನರ್​ ಅಮಿತ್​ ಮಿಶ್ರಾ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ. ಇದೇ ತಿಂಗಳ ಆರಂಭದಲ್ಲಿ 14ನೇ ಐಪಿಎಲ್​ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಪ್ರಸಿದ್ಧ ಕೃಷ್ಣ ಹಾಗೂ ಅಮಿತ್​ ಮಿಶ್ರಾಗೆ ಕೋವಿಡ್​-19 ಕಾಣಿಸಿಕೊಂಡಿತ್ತು. ಅಮಿತ್​ ಮಿಶ್ರಾಗೆ ಮೇ 4 ರಂದು ಹಾಗೂ ಮೇ 8 ರಂದು ಪ್ರಸಿದ್ಧ ಕೃಷ್ಣಗೆ ಕರೊನಾ ವೈರಸ್​ ಕಾಣಿಸಿಕೊಂಡಿತ್ತು. ಪ್ರಸಿದ್ಧ ಕೃಷ್ಣ ಪೂರ್ಣ ಪ್ರಮಾಣದಲ್ಲಿ ಕೋವಿಡ್​ನಿಂದ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಡೈರೆಕ್ಟ್​ ಬೀಮರ್​ ಎಸೆಯುವೆ ಎಂದು ರಾಬಿನ್​ ಉತ್ತಪ್ಪಗೆ ಬೆದರಿಕೆ ಹಾಕಿದ್ದ ಪಾಕ್​ ಮಾಜಿ ವೇಗಿ..!,

    ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಪಿನ್ನರ್​ ಅಮಿತ್​ ಮಿಶ್ರಾ ಕೋವಿಡ್​ನಿಂದ ಚೇತರಿಕೆ ಕಂಡಿರುವ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕೋವಿಡ್​ ವಾರಿಯರ್ಸ್​ಗಳಿಗೆ ಧನ್ಯವಾದ ಅಪಿರ್ಸಿದ್ದಾರೆ. ಪ್ರಸಿದ್ಧ ಕೃಷ್ಣ, ಕೋವಿಡ್​ ಸೋಂಕು ಕಾಣಿಸಿಕೊಂಡ ಕೆಕೆಆರ್​ ತಂಡದ ನಾಲ್ಕನೇ ಆಟಗಾರನಾಗಿದ್ದರು. ಇದಕ್ಕೂ ಮೊದಲು ವರುಣ್​ ಚಕ್ರವತಿರ್, ಸಂದೀಪ್​ ವಾರಿಯರ್​, ಟಿಮ್​ ಸೀರ್ಟ್​ಗೂ ಕೋವಿಡ್​ ಕಾಣಿಸಿಕೊಂಡಿತ್ತು. ಲೀಗ್​ ಮುಂದೂಡಿಕೆಯಾದ ಬಳಿಕ ಬೆಂಗಳೂರಿಗೆ ಆಗಮಿಸಿದ ಪ್ರಸಿದ್ಧ ಕೃಷ್ಣಗೆ ಕೋವಿಡ್​ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿದ್ದರು.

    ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವರೇ ಎಬಿಡಿ?ಸ್ಪಷ್ಟ ಮಾಹಿತಿ ಕೊಟ್ಟ ಸಿಎಸ್ ಎ

    ಪ್ರಸಿದ್ಧ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಂಡಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್​ಗೆ ತೆರಳಲಿರುವ ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಲು ಬುಧವಾರ ಮುಂಬೈಗೆ ಪ್ರಯಾಣಿಸಲಿದ್ದಾರೆ. ಮುಂಬೈನಲ್ಲಿ 14 ದಿನಗಳ ಕಾಲ ಆಟಗಾರರು ಕ್ವಾರಂಟೈನ್​ಗೆ ಒಳಗಾಗಲಿದ್ದು, ಜೂನ್​ 2ರಂದು ಇಂಗ್ಲೆಂಡ್​ನತ್ತ ಪ್ರಯಾಣ ಬೆಳೆಸಲಿದೆ. ವಿರಾಟ್​ ಕೊಹ್ಲಿ ಸಾರಥ್ಯದ ಭಾರತ ತಂಡ ಜೂನ್​ 18 ರಿಂದ 22ರವರೆಗೆ ಸೌಥಾಂಪ್ಟನ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಚೊಚ್ಚಲ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯವನ್ನಾಡಲಿದೆ. ಬಳಿಕ ಆಗಸ್ಟ್​ ತಿಂಗಳಲ್ಲಿ ಆತಿಥೇಯ ಇಂಗ್ಲೆಂಡ್​ ಎದುರು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ.

    ಲಸಿಕೆ ಹಾಕಿಸಿಕೊಂಡ ಫೋಟೋ ಶೇರ್‌ ಮಾಡಿ ಪೇಚಿಗೆ ಸಿಲುಕಿದ ಟೀಂ ಇಂಡಿಯಾ ಬೌಲರ್‌- ತನಿಖೆಗೆ ಆದೇಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts