ಕಾಲೇಜಿಗೆ ಬಂದ ವಿದ್ಯಾರ್ಥಿಗೆ ಹೃದಯಾಘಾತ: ಚಿತ್ರದುರ್ಗದಲ್ಲಿ 17 ವರ್ಷದ ಹುಡುಗನ ಸಾವು

17 year boy
Published on

ಚಿತ್ರದುರ್ಗ: ಯುವ ಪೀಳಿಗೆಯಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದ್ದು, ಅದಕ್ಕೆ ಪುಷ್ಠಿ ನೀಡುವಂತ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕೇವಲ 17 ವರ್ಷದ ಹುಡುಗ ಹೃದಯಾಘಾತದಿಂದ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಚಿತ್ರದುರ್ಗ ನಗರದ ನಿವಾಸಿ ಪ್ರಕಾಶ್ ಮೃತ ವಿದ್ಯಾರ್ಥಿ. ಕಾಲೇಜಿಗೆ ಬಂದ ಪ್ರಕಾಶ್​, ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ನಟ ಪುನೀತ್​ಗೆ ಕಾಣಿಸಿಕೊಂಡಂತೆ ಪ್ರಕಾಶ್​ಗೂ ಎದೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದೊಯ್ಯುಯ್ದು ಚಿಕಿತ್ಸೆ ಕೊಡಿಸುವುದರೊಳಗೆ ಪ್ರಕಾಶ್​ ಇಹಲೋಕ ತ್ಯಜಿಸಿದ್ದಾನೆ. ಪ್ರಕಾಶ್​ ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡ್ತಿದ್ದ.

ಎಂದಿನಂತೆಯೇ ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ. ಕಾಲೇಜು ಮೆಟ್ಟಿಲೇರುವಾಗ ಸುಸ್ತಾಗಿ ಕುಳಿತಿದ್ದ. ಇದಾದ ಬೆನ್ನಲ್ಲೇ ಕಾಲೇಜು ಸಿಬ್ಬಂದಿ ಪಾಲಕರಿಗೆ ತಿಳಿಸಿ, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಯುವಕ ಮೃತಪಟ್ಟಿದ್ದಾನೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net