ತಮಿಳು ನಟ ವಿಶಾಲ್​ ಬೆನ್ನಲ್ಲೇ ಅಪ್ಪು ನೆನಪಲ್ಲಿ ಮಹತ್ವದ ಕಾರ್ಯಕ್ಕೆ ಮುಂದಾದ ನಟಿ ಪ್ರಣೀತಾ!

Praneetha
Published on

ಹೈದರಾಬಾದ್​: ಮೇರು ನಟ ಪುನೀತ್​ ರಾಜ್​ಕುಮಾರ್​ ಅಕಾಲಿಕ ಮರಣ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ಬಹು ದೊಡ್ಡ ಆಘಾತ ನೀಡಿದೆ. ಪುನೀತ್​ರನ್ನು ಪ್ರೀತಿಸುತ್ತಿದ್ದ ಅಭಿಮಾನಿಗಳಿಗೆ ಅಪ್ಪು ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕಲಾವಿದರಿಗೂ ಅಪ್ಪು ನೆನಪು ತುಂಬಾ ಕಾಡುತ್ತಿದೆ.

ತಮಿಳು ನಟ ವಿಶಾಲ್​ ಅವರು ಪುನೀತ್​ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಶಿಕ್ಷಣವನ್ನು ಒಂದು ವರ್ಷಗಳ ಕಾಲ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ವಿಶಾಲ್​ ನಿರ್ಧಾರವನ್ನು ಇಡೀ ಚಿತ್ರರಂಗ ಸ್ವಾಗತಿಸಿದೆ. ಇದೀಗ ಅಪ್ಪು ನೆನಪಲ್ಲಿ ನಟಿ ಪ್ರಣೀತಾ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ತಮ್ಮ ಪ್ರಣೀತಾ ಫೌಂಡೇಶನ್​ ಮೂಲಕ ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ಅಪ್ಪುಗೆ ಗೌರವ ಪೂರ್ವಕವಾಗಿ ಬೆಂಗಳೂರಿನಲ್ಲಿ ಒಂದು ದಿನ ಮೆಡಿಕಲ್​ ಕ್ಯಾಂಪ್​ ಇಡುವುದಾಗಿ ಪ್ರಣೀತಾ ಘೋಷಿಸಿದ್ದು, ಎಲ್ಲರೂ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಈ ಮೆಡಿಕಲ್​ ಕ್ಯಾಂಪ್​ ನವೆಂಬರ್​ 3ರಂದು ಅಬೇಂಡ್ಕರ್​ ಭವನದಲ್ಲಿ ನಡೆಯಲಿದೆ. ಸಾಕಷ್ಟು ಸಮಾಜಮುಖಿ ಕೆಲಸ ಮಾಡಿರುವ ಪುನೀತ್​ಗೆ ಗೌರವ ಸೂಚಿಸುವ ಉದ್ದೇಶದಿಂದ ಪ್ರಣೀತಾ ಈ ಕಾರ್ಯ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net