ಮಗುವಿನಂತೆ ಕರುವನ್ನು ಸಿಂಗಾರಗೊಳಿಸಿ ನಾಮಕರಣ ಮಾಡಿದ ಗೋ ಪ್ರೇಮಿ: ಊಟದ ವ್ಯವಸ್ಥೆಯು ಇತ್ತು

Cow
Published on

ಬೀದರ್: ಮನೆಯಲ್ಲಿ ಮಗು ಹುಟ್ಟಿದರೆ ಸಂಭ್ರಮದಿಂದ ನಾಮಕರಣ ಮಾಡುತ್ತಾರೆ ಮತ್ತು ಮನೆಯಲ್ಲಿ ಹಬ್ಬದ ವಾತಾವರಣ ಇರುವುದು ಸಹಜ. ಆದರೆ, ಭಾಲ್ಕಿಯ ಭಾತಂಬ್ರಾ ಗ್ರಾಮದಲ್ಲಿ ಗೋ ಪ್ರೇಮಿಯೊಬ್ಬ ತಮ್ಮ ಮನೆಯಲ್ಲಿ ಕರುವಿಗೆ ಮಗುವಿನಿಂತೆ ತೊಟ್ಟಿಲು ಇಟ್ಟು ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ.

ಕರುವಿಗೆ ಹೊಸ ಬಟ್ಟೆಗಳನ್ನು ತೊಡಿಸಿ, ಕಾಲಿನಲ್ಲಿ ಬೆಳ್ಳಿಯ ಖಡ್ಗಗಳನ್ನು ಹಾಕುವ ಮೂಲಕ ಮುದ್ದಾದ ಮಗುವಿನಂತೆ ಕರುವನ್ನು ಸಿಂಗಾರಗೊಳಿಸಿ ನಾಮಕರಣ ಮಾಡುವ ಮೂಲಕ ಗೋ ಪ್ರೇಮ ಮೆರೆದಿದ್ದಾರೆ.

ಮನೆಯಲ್ಲಿ ಹೋಮ-ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ. ಇದಿಷ್ಟೇ ಅಲ್ಲದೆ, ನಾಮಕರಣಕ್ಕೆ ಬಂದ ಜನರಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದಿಷ್ಟು ನಡೆದಿದ್ದು, ಭಾಲ್ಕಿಯ ಭಾತಂಬ್ರಾ ಗ್ರಾಮದ ಸಚಿನ‌ ಮೇಳಕುಂದೆ ಅವರ ಮನೆಯಲ್ಲಿ. ಇದೀಗ ಮೇಳಕುಂದೆ ಅವರ ಗೋಪ್ರೇಮಕ್ಕೆ ಎಲ್ಲರೂ ಮನಸೋತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net