

ರಾಷ್ಟ್ರೀಯ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕಲ್ಯಾಣ್ ಸಿಂಗ್- ಆ. 21; ಬೂಟಾ ಸಿಂಗ್-ಜ. 2; ಅಜಿತ್ ಸಿಂಗ್- ಮೇ 6; ವೀರಭದ್ರ ಸಿಂಗ್-ಜು. 8
ಜನರಲ್ ಬಿಪಿನ್ ರಾವತ್-ಡಿ.8: ಮೂರೂ ಸೇನಾ ಪಡೆಗಳ ಮೊದಲ ಮುಖ್ಯಸ್ಥ(ಚೀಫ್ ಆಫ್ ಡಿಫೆನ್ಸ್ ಸ್ಟಾಫ್-ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿ 14 ಜನರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿ ದುರಂತಕ್ಕೀಡಾಯಿತು. ಸೂಳೂರಿನ ವಾಯುನೆಲೆಯಿಂದ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಕಾಲೇಜಿಗೆ ತೆರಳುತ್ತಿದ್ದಾಗ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಅವಘಡ ಸಂಭವಿಸಿತು. ರಾವತ್ ಜತೆಗೆ ಪತ್ನಿ ಮಧುಲಿಕಾ, ಬ್ರಿಗೇಡಿಯರ್ ಎಸ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ಇತರರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಜೀವಂತವಾಗಿ ಉಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಡಿ. 15ರಂದು ನಿಧನರಾದರು.
ಪರಿಸರ: ಸುಂದರ್ಲಾಲ್ ಬಹುಗುಣ- ಮೇ 21 ಹಿಮಾಲಯದಲ್ಲಿ ಕಾಡು ಸಂರಕ್ಷಣೆಗೆ ನಿರಂತರ ಹೋರಾಡಿ ಆ ಮೂಲಕ ದೇಶಾದ್ಯಂತ ಪರಿಸರ ಕಾಳಜಿ ಮೂಡಿಸಿದ ಚಿಪ್ಕೋ ಚಳವಳಿಯ ನೇತಾರ. ದೇಶದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದ ಅವರು ಕರ್ನಾಟಕದ ಅಪ್ಪಿಕೋ ಆಂದೋಲನಕ್ಕೂ ಪ್ರೇರಕ ಶಕ್ತಿಯಾಗಿದ್ದರು.
ಸಂಗೀತ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪದ್ಮವಿಭೂಷಣ ಗುಲಾಮ್ ಮುಸ್ತಫಾ ಖಾನ್- ಜ. 17
ಕ್ರೀಡೆ: ಕ್ರೀಡಾಪಟು ಮಿಲ್ಖಾ ಸಿಂಗ್- ಜೂ. 18; ಕ್ರಿಕೆ್ಝ್ರೆಟಿಗ ಯಶಪಾಲ್ ಶರ್ಮ- ಜು. 13
(ಬರಹ: ರಾಜಶೇಖರ ಜೋಗಿನ್ಮನೆ, ರಮೇಶ ದೊಡ್ಡಪುರ)