ಔಷಧಿ ಪಡೆಯಲು ಪ್ರತಿದಿನ ಮನೆಗೆ ಬರ್ತಿದ್ದ ಮಹಿಳೆಯ ಬರ್ಬರ ಹತ್ಯೆ: ನಾಟಿವೈದ್ಯನ ಕರಾಳ ಮುಖವಿದು

BNG Woman
Published on

ಬೆಂಗಳೂರು: ನಾಟಿ ವೈದ್ಯನೊಬ್ಬ ಚಿನ್ನದ ಸರಕ್ಕಾಗಿ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಯಲಹಂಕ ಠಾಣಾ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಬಳಿ ಘಟನೆ ನಡೆದಿದೆ.

ಸಿದ್ದಮ್ಮ (55) ಮೃತರು. ಆರೋಪಿ ನಾಟಿ ವೈದ್ಯ ಸಲೀಂ ಎಂಬಾತನಿಂದ ಕೊಲೆ. ಅನಾರೋಗ್ಯ ಹಿನ್ನೆಲೆಯಲ್ಲಿ ಮೃತ ಸಿದ್ದಮ್ಮ ಕಳೆದ ಹಲವು ತಿಂಗಳಿಂದಲೂ ಸಲೀಂ ಮನೆಗೆ ಹೋಗಿ ಔಷಧಿ ಪಡೆಯುತ್ತಿದ್ದಳು. ಈ ವೇಳೆ ಆಕೆಯ ಬಳಿ ಇದ್ದ ಚಿನ್ನದ ಸರ, ಓಲೆ ಮೇಲೆ ಸಲೀಂ ಕಣ್ಣಿಟ್ಟಿದ್ದ.

ಎಂದಿನಂತೆ ನಿನ್ನೆಯು ಕೂಡ ಆರೋಪಿ ಸಲೀಂ ಮನೆಗೆ ಔಷಧಿಗಾಗಿ ಸಿದ್ದಮ್ಮ ಹೋಗಿದ್ದರು. ಈ ವೇಳೆ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ಕದ್ದು‌ ಪರಾರಿಯಾಗಿದ್ದಾನೆ. ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net