

ಬೆಂಗಳೂರು: ಸಿನಿಮಾ ಸ್ಟೈಲ್ನಲ್ಲಿ ಸ್ಯಾಂಡಲ್ವುಡ್ ಖಳನಟರಿಂದಲೇ ನಿಜವಾಗಿಯೂ ಅಪಹರಣ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. 10 ಲಕ್ಷ ರೂಪಾಯಿಗೆ ವಕೀಲರನ್ನೇ ಕಿಡ್ನಾಪ್ ಮಾಡಿದ ಖಳನಟರು ಅಥವಾ ಸಾಹಸ ಕಲಾವಿದರು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ.
ಉದ್ಯಮಿ ಜತೆ ಸೇರಿ ವಕೀಲರನ್ನೇ ಕಿಡ್ನಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರುವ ಆರೋಪ ಕೇಳಿಬಂದಿದೆ. ನಾಗರಭಾವಿಯ ಸ್ವಾತಿ ಹೋಟೆಲ್ ಬಳಿ ಅ. 20ರಂದು ವಕೀಲ ಅಭಯ್ ರವೀಂದ್ರ ಕುಲಕರ್ಣಿ ಕಿಡ್ನಾಪ್ ಆಗಿತ್ತು. ಸಾಹಸ ಕಲಾವಿದರ ಪ್ಲಾನ್ ಅನ್ನು ವಿಫಲ ಮಾಡಿ ಸಿನಿಮಾ ಸ್ಟೈಲ್‌ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಆದ 12 ಗಂಟೆಯೊಳೆಗೆ ಆರೋಪಿಗಳ ಹೆಡೆಮುರಿಯನ್ನು ಇನ್ಸ್ಪೆಕ್ಟರ್ ಲೋಹಿತ್ ಅಂಡ್ ಟೀಂ ಕಟ್ಟಿದೆ.
ಸಿನಿಮಾ ಸ್ಟೈಲ್ನಲ್ಲಿ ಎರಡು ಫಾರ್ಚ್ಯೂನರ್ ಕಾರಿನಲ್ಲಿ ವಕೀಲರನ್ನು ಕಿಡ್ನಾಪ್ ಮಾಡಲಾಗಿತ್ತು. ವಕೀಲ ರವೀಂದ್ರ ಕುಲಕರ್ಣಿ ಖಾಸಗಿ ಕಂಪನಿಯ ಕಾನೂನು ಸಲಹೆಗಾರರಾಗಿದ್ದರು. ಅದೇ ಕಂಪನಿಯಲ್ಲಿ ಅಂದ್ರಹಳ್ಳಿಯ ಉದ್ಯಮಿ ಸಿದ್ದೇಶ್ ಹಣ ಹೂಡಿಕೆ ಮಾಡಿದ್ದರು. ರವೀಂದ್ರ ಮೂಲಕ ಮಾತುಕತೆ ನಡೆಸಿ ಸಿದ್ದೇಶ್ ಹಣ ಹೂಡಿಕೆ ಮಾಡಿದ್ದರು. ಬೆಸಿಕ್ ಚಾರ್ಜಸ್ ಎಂದು ಸಿದ್ದೇಶ್ನಿಂದ ರವೀಂದ್ರ ಅವರು 6-7 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದೆ.
ಹಣ ವಾಪಸ್ ಕೊಡದೇ ಇದ್ದಾಗ ಸಿದ್ದೇಶ್ ವಕೀಲರ ದುಂಬಾಲು ಬಿದ್ದಿದ್ದ. ಹಣವನ್ನು ಕೊಡದೇ ಹೋದಾಗ ಉದ್ಯಮಿ ಸಿದ್ದೇಶ್, ಮಾಡಿದ್ದ ಕಿಡ್ನಾಪ್ ಪ್ಲಾನ್ಗೆ ಸಾಹಸ ಕಲಾವಿದರು ಕೈ ಜೊಡಿಸಿದ್ದರು. ಕಲಾವಿದರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಎಂಬುವರಿಂದ ರವೀಂದ್ರರ ಕಿಡ್ನಾಪ್ ಆಗಿತ್ತು. ಆರೋಪಿ ಸಂಜಯ್ ಭರ್ಜರಿ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.
ಕಿಡ್ನಾಪ್ ಮಾಡಿ ಅಂದ್ರಹಳ್ಳಿಯ ಆಫೀಸ್ನಲ್ಲಿಟ್ಟು ರವೀಂದ್ರಾಗೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ರವೀಂದ್ರ ಮನೆಯವರಿಗೆ ಕಾಲ್ ಮಾಡಿ 10 ಲಕ್ಷ ರೂಪಾಯಿ ತರುವಂತೆ ಡಿಮ್ಯಾಂಡ್ ಮಾಡಿದ್ದರು. ರವೀಂದ್ರ ಮೊಬೈಲ್ನಿಂದ ಲೊಕೇಷನ್ ಕಳುಹಿಸಿ ಕಿಡ್ನಾಪರ್ಸ್ ಪೊಲೀಸರ ಕೈಗೆ ತಗ್ಲಾಕೊಂಡಿದ್ದಾರೆ. ಸದ್ಯ ಘಟನೆ ಸಂಬಂಧ 9 ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)