ಉದ್ಯಮ-ವ್ಯವಹಾರ ಹೆಚ್ಚಳದಿಂದ ಉದ್ಯೋಗಗಳು ಸೃಷ್ಟಿ: ಸಿಎಂ ಬೊಮ್ಮಾಯಿ‌ ಆಶಯ

CM Bommai
Published on

ಬೆಂಗಳೂರು: ರಾಜ್ಯದಲ್ಲಿ ಉದ್ಯಮ, ವ್ಯವಹಾರಗಳು ಹೆಚ್ಚಿದಷ್ಟು ಉದ್ಯೋಗ ಅವಕಾಶಗಳು ಸೃಷ್ಟಿಯಾಗಿ ಆರ್ಥಿಕ ಚಟುವಟಿಕೆಗಳು, ಆರ್ಥಿಕತೆ ವೃದ್ಧಿಸುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ನಾಗಸಂದ್ರದಲ್ಲಿ ಐಕಿಯಾ ಕಂಪನಿಯ ಗೃಹ ಬಳಕೆ ಪೀಠೋಪಕರಣಗಳ ಮೊದಲ ಮಳಿಗೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾವೋಸ್ ನ ಆರ್ಥಿಕ ಶೃಂಗ ಸಭೆಯಲ್ಲಿ ಐಕಿಯಾ ಕಂಪನಿ ಜತೆಗೆ ನಡೆದ ಮಾತುಕತೆ ಕಾರ್ಯಗತವಾಗಿದೆ ಎಂದರು.

ಬೆಂಗಳೂರಿನ ಮೊದಲ ಮಳಿಗೆಯಿದಾಗಿದ್ದು, 3,000 ಕೋಟಿ ರೂ ಬಂಡವಾಳ ಹೂಡಿದ್ದು, ಒಂದು ಸಾವಿರ ಜನರಿಗೆ ಉದ್ಯೋಗಗಳು ಲಭಿಸಲಿವೆ. ಹೆಚ್ಚೆಚ್ಚು ಮಳಿಗೆಗಳನ್ನು ತೆರೆಯಬೇಕೆಂಬ ಸಲಹೆಯನ್ನು ಕಂಪನಿ ಸ್ವೀಕರಿಸಿದೆ.

ಸ್ಥಳೀಯರಿಗೆ ಅದರಲ್ಲೂ ಮಹಿಳೆಯರು ಸೇರಿ ಶೇಕಡ ‌70ಕ್ಕೂ ಹೆಚ್ಚು ಆದ್ಯತೆ, ಸ್ಥಳೀಯ ಕಾರ್ಪೆಂಟರ್ ಇತ್ಯಾದಿ ಕುಶಲಕರ್ಮಿಗಳಿಗೆ ಶೇ.30ರಷ್ಟು ಪ್ರಾಶಸ್ತ್ಯ ನೀಡಬೇಕೆಂಬ ಪ್ರಸ್ತಾವನೆಯನ್ನು ಕಂಪನಿ ಒಪ್ಪಿಕೊಂಡಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net