ಶಿವಮೂರ್ತಿ ಮುರುಘಾ ಶರಣರ ಜನ್ಮದಿನ ನಾಡಿನ ಸಮಾನತಾ ದಿನವಾಗಿ ಆಚರಣೆ: ಸಿಎಂ ಬೊಮ್ಮಾಯಿ ಘೋಷಣೆ

Murugha Sharanaru
Published on

ಬೆಂಗಳೂರು: ರಾಜ್ಯದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಜನ್ಮ ದಿನವಾದ ಏ.11 ರಂದು ರಾಜ್ಯ ಸಮಾನತಾ ದಿನಾಚರಣೆ ಎಂದು ಆಚರಣೆ ಮಾಡಲಾಗುವುದು ಎಂದು ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪರಿವರ್ತನಪರ ಧರ್ಮ ಸಂಸತ್ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಶಿವಮೂರ್ತಿ ಮುರುಘಾ ಶರಣರ ದಿನಾಚರಣೆ ಬದಲು ಸಮಾನತಾ ದಿನ ಆಚರಣೆ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನಲ್ಲಿ 12ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆ ಕ್ರಾಂತಿ ಮಾಡಿದ್ದಾರೆ. ಅದೇ ರೀತಿ 21ನೇ ಶತಮಾನದಲ್ಲಿ ಸಮಾನತೆಯ ಕ್ರಾಂತಿಯನ್ನು ಮಾಡುತ್ತಿರುವ ಮುರುಘಾ ಮಠದ ಶರಣರ ಕಾರ್ಯ ಶ್ಲಾಘನೀಯವಾಗಿದೆ. ಒಂದು ಕಾಲದಲ್ಲಿ ಮೈಸೂರು ಅರಸರಿಗೆ ನೆರವು ನೀಡಿದ್ದ ಮುರುಘಾ ಮಠದ ಭೌತಿಕ ಆಸ್ತಿಯ ಜತೆಗೆ ಸಮಾನತೆಯ ಕ್ರಾಂತಿ ಸಾರುವ ಮೂಲಕ ಆಧ್ಯಾತ್ಮಿಕ ಆಸ್ತಿ ಹೆಚ್ಚಳ ಮಾಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ. 2019ರಲ್ಲಿ ಆಯೋಜಿಸಿದ್ದ ಅಸಂಖ್ಯ ಗಣಮೇಳ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಅವರ ಜನ್ಮ ದಿನವನ್ನು ಸರ್ಕಾರದಿಂದ ಇನ್ನುಮುಂದೆ ಸಮಾನತಾ ದಿನವೆಂದು ಆಚರಣೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net