ಊಟ ಮಾಡುವಾಗ ಪತ್ನಿಯ ಜತೆ ಜಗಳ: ರಜೆ ಮೇಲೆ ಬಂದಿದ್ದ ಬಾಗಲಕೋಟೆ ಯೋಧ ಬಾಮೈದನಿಂದಲೇ ಕೊಲೆ

Yodha
Published on

ಬಾಗಲಕೋಟೆ: ರಜೆ ಮೇಲೆ ಬಂದಿದ್ದ ಯೋಧನೊಬ್ಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಸಹೋದರನಿಂದಲೇ ಕೊಲೆಯಾಗಿರುವ ದುರಂತ ಘಟನೆ ಗುರುವಾರ (ಆ.11) ರಾತ್ರಿ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.

ಕರಿಸಿದ್ದಪ್ಪ‌ ಕಳಸದ (25) ಕೊಲೆಯಾದ ಯೋಧ. ಊಟ ಮಾಡುವ ವೇಳೆ ಪತ್ನಿ ಜೊತೆ ಜಗಳ ಮಾಡಿದ್ದ ಕಾರಣಕ್ಕೆ ಹತ್ಯೆಯಾಗಿದ್ದಾನೆ. ಕರಿಸಿದ್ದಪ್ಪ, ವಿದ್ಯಾ ಎಂಬುವಳನ್ನು ಪ್ರೀತಿಸಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ. ಭಾರತೀಯ ಸೇನೆಯ ರಾಜಸ್ಥಾನ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ‌, ರಜೆ ತೆಗೆದುಕೊಂಡು ನಾಲ್ಕು ದಿನದ ಹಿಂದಷ್ಟೇ ಖುಷಿ ಖುಷಿಯಾಗಿ ತವರಿಗೆ ಬಂದಿದ್ದ.

ನಿನ್ನೆ ರಾತ್ರಿ ಊಟ ಮಾಡುವಾಗ ಪತ್ನಿ ವಿದ್ಯಾಳ ಜೊತೆ ಕರಿಸಿದ್ದಪ್ಪ ಜಗಳ ಮಾಡಿದ್ದ. ಈ ವಿಚಾರವನ್ನು ವಿದ್ಯಾ, ತನ್ನ ಸಹೋದರ ಧರಿಗೌಡಗೆ ತಿಳಿಸಿದ್ದಳು. ಇದರಿಂದ ಕುಪಿತಗೊಂಡ ಸಿದ್ದನಗೌಡ, ಭಾವನ ಮನೆಗೆ ಬಂದು ನನ್ನ ಸಹೋದರಿಗೆ ಕಿರುಕುಳ ಕೊಡ್ತೀಯಾ ಅಂತಾ ಚಾಕು ಇರಿದು ಕೊಲೆ ಮಾಡಿದ್ದಾನೆ.

ಘಟನೆ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಕೆರೂರು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net