ಇಳಕಲ್ ಸೀರೆಯಲ್ಲಿ 'ಜೇಮ್ಸ್​' ಶತದಿನೋತ್ಸವ; ಅಪ್ಪು ಅಭಿಮಾನಿಯಿಂದ ವಿಶಿಷ್ಟ ಶುಭಾಶಯ

1255784
Published on

ಬೆಂಗಳೂರು: ಪವರ್​ಸ್ಟಾರ್​ ಪುನೀತ್ ರಾಜ್‌ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್' ಶತ ದಿನ ಆಚರಿಸಲಿ ಎಂದು ನೇಕಾರ ಸಮುದಾಯದ ಯುವಕನೊಬ್ಬ ತನ್ನ ಕೆಲಸದ ಮೂಲಕವೇ ವಿಶಿಷ್ಟ ರೀತಿಯಲ್ಲಿ ಹಾರೈಸಿದ್ದಾನೆ.

ಸೀರೆಯಲ್ಲಿ 'ಹಂಡ್ರೆಡ್ ಡೇಸ್ ಅಪ್ಪು ಜೇಮ್ಸ್' ಎಂದು ನೇಯ್ದಿದ್ದಾನೆ. ಬಾಗಲಕೋಟೆ ಜಿಲ್ಲೆ ಇಳಕಲ್ ನಗರದ ನೇಕಾರ ಮೇಘರಾಜ್ ಎಂಬ ಅಪ್ಪು ಅಭಿಮಾನಿಯೇ ಈ ರೀತಿಯ ಕೈಚಳಕ ತೋರಿದವನು.

ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಅಭಿಮಾನಿಗಳು ಎಲ್ಲರೂ ಸೇರಿ 'ಜೇಮ್ಸ್' ಚಿತ್ರ ಎಲ್ಲ ಚಿತ್ರಮಂದಿರಗಳಲ್ಲೂ ನೂರು ದಿನ ಪ್ರದರ್ಶನ ಕಾಣುವಂತೆ ಸಹಕರಿಸಬೇಕು ಎನ್ನುತ್ತಾನೆ ಮೇಘರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net