ಪಿಎಸ್​ಐ ಪರೀಕ್ಷೆಯಲ್ಲಿ ಅಕ್ರಮ, ಆರು ಆರೋಪಿಗಳ ಬಂಧನ

Capture
Published on

ಕಲಬುರಗಿ: 545 ಪಿಎಸ್​ಐ ಪರೀಕ್ಷೆಯಲ್ಲಿ ನಡೆದಿರುವ ಭಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಐಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಮೂವರು ಅಭ್ಯರ್ಥಿಗಳು ಮತ್ತು ಮೂವರು ಮೇಲ್ವಿಚಾರಕರು.

ರಾಯಚೂರು ಮೂಲದ ಕೆ. ಪ್ರವೀಣ್ ಕುಮಾರ್, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ನಿವಾಸಿ ಚೇತನ್ ನಂದಗಾಂವ್, ಕಲಬುರಗಿ ನಗರದ ಹಾಲ್ ಸುಲ್ತಾನ್​​ಪುರ ನಿವಾಸಿ ಅರುಣ್ ಪಾಟೀಲ್, ಜ್ಞಾನಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಮೇಲ್ವಿಚಾರಕರಾದ ಸುಮಾ, ಸಿದ್ದಮ್ಮಾ, ಸಾವಿತ್ರಿ ಬಂಧನಕ್ಕೆ ಒಳಗಾದವರು.

ಬಂಧಿತ ಆರೋಪಿಗಳನ್ನು ಸಿಐಡಿ ಪೊಲೀಸರು ಕಲಬುರಗಿ ನಗರದ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net