ಪ್ರಾಕೃತಿಕ ವಿಕೋಪ ಸಂತ್ರಸ್ತರ ಪರಿಹಾರಕ್ಕೂ ಕತ್ತರಿ : ಉಪ್ಪಿನಂಗಡಿಯಲ್ಲಿ ಬಿಜೆಪಿ ಮುಖಂಡರ ಆರೋಪ

New Project (37)
Published on

ಉಪ್ಪಿನಂಗಡಿ: ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಮುಖಂಡರಾದ ಸುನೀಲ್ ಕುಮಾರ್ ದಡ್ಡು , ಚಂದಪ್ಪ ಮೂಲ್ಯ, ಬಂಗಾರಡ್ಕ ವಿಶ್ವೇಶ್ವರ ಭಟ್, ಲೋಕೇಶ್ ಬೆತ್ತೋಡಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಾಕೃತಿಕ ವಿಕೋಪದಡಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ ಪರಿಹಾರಧವನ್ನು ಈ ಹಿಂದಿನ ಬಿಜೆಪಿ ಸರಕಾರ ನೀಡುತ್ತಿದ್ದರೆ, ಈಗಿನ ಸಿದ್ದರಾಮಯ್ಯ ಸರ್ಕಾರ ಕೇವಲ 1.20 ಲಕ್ಷ ನೀಡಿ ಸಂತ್ರಸ್ತರನ್ನು ಕಡೆಗಣಿಸುತ್ತಿದೆ ಆರೋಪಿಸಿದರು.

ಪ್ರಮುಖರಾದ ಜಯಾನಂದ, ಎನ್.ಉಮೇಶ್ ಶೆಣೈ, ಧನಂಜಯ ನಟ್ಟಿಬೈಲ್, ವಿದ್ಯಾಧರ ಜೈನ್, ಪ್ರಸಾದ್ ಭಂಡಾರಿ, ಚಂದ್ರಶೇಖರ್, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಧಾಕೃಷ್ಣ ಭಟ್, ಸುಜಾತಾ ಕೃಷ್ಣ ಆಚಾರ್ಯ, ಆದೇಶ್ ಶೆಟ್ಟಿ, ಶ್ರೀರಾಮ್ ಭಟ್ ಪಾತಾಳ, ಹರಿರಾಮಚಂದ್ರ, ಎನ್.ಹರೀಶ್ ನಾಯಕ್, ಹೊನ್ನಪ್ಪ ಗೌಡ ವರೆಕ್ಕ, ಚಿದಾನಂದ ಪೆರಿಯಡ್ಕ, ರುಕ್ಮಿಣಿ, ಜಯಂತಿ, ವನಿತಾ, ಉಷಾ ನಾಯ್ಕ, ನವೀನ್ ಪೆರಿಯಡ್ಕ, ಕಾರ್ತಿಕ್, ರಾಮಚಂದ್ರ ಮಣಿಯಾಣಿ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net