15ರಂದು ಕಸ್ತೂರಿರಂಗನ್ ವರದಿ ವಿರುದ್ಧ ಹೋರಾಟ : ಕಿಶೋರ್ ಶಿರಾಡಿ ಮಾಹಿತಿ : ನೂಜಿಬಾಳ್ತಿಲದಲ್ಲಿ ಪ್ರತಿಭಟನಾ ಸಭೆ

New Project (10)
Published on

ಕಡಬ: ಕಸ್ತೂರಿರಂಗನ್ ವರದಿ ಕೈಬಿಡುವಂತೆ ಒತ್ತಾಯಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮಸ್ಥರ ಸಹಯೋಗದೊಂದಿಗೆ ಪ್ರತಿಭಟನಾ ಸಭೆ ನೂಜಿಬಾಳ್ತಿಲದಲ್ಲಿ ನಡೆಯಿತು.

ಮಲೆನಾಡು ಹಿತರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ಕಸ್ತೂರಿ ರಂಗನ್ ವರದಿ ಕೈಬಿಡುವಂತೆ ಹಾಗೂ ಜಂಟಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿ ನ.15ರಂದು ಬೆಳಗ್ಗೆ ಗುಂಡ್ಯದಲ್ಲಿ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಗ್ರಾಮಸ್ಥರು ಸೇರಿ ಹೋರಾಟ ನಡೆಸಲಿದ್ದೇವೆ. ಈ ಹೋರಾಟದಲ್ಲಿ ಜನಪ್ರತಿನಿಧಿಗಳು ಭಾಗವಹಿಸಿ ಯೋಜನೆ ಕೈಬಿಡಲು ಸರ್ಕಾರಕ್ಕೆ ಒತ್ತಡ ಹಾಕಲಿದ್ದಾರೆ. ಜಿಲ್ಲಾಧಿಕಾರಿ, ಡಿಎಫ್‌ಒ ಬಂದು ಮನವಿ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತೇವೆ. ಎಲ್ಲ ಗ್ರಾಮಗಳಿಂದ ಹೆಚ್ಚಿನ ಜನರು ಭಾಗವಹಿಸಬೇಕು ಎಂದರು.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿದರು. ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಜಾಲು, ಸದಸ್ಯರಾದ ಗಂಗಮ್ಮ ಕಲ್ಲುಗುಡ್ಡೆ, ವಿನಯಕುಮಾರಿ ಬಳಕ್ಕ, ಶ್ರೀಧರ ಗೌಡ ಗೋಳ್ತಿಮಾರ್, ಪ್ರಮುಖರಾದ ಉಮೇಶ್ ಶೆಟ್ಟಿ ಸಾಯಿರಾಮ್, ಲಿಂಗಪ್ಪ ಗೌಡ ಕಾನದಬಾಗಿಲು, ತಂಗಚ್ಚನ್, ಯಶೋಧರ ಕೊಣಾಜೆ, ಮಾಯಿಲಪ್ಪ ರೆಂಜಿಲಾಡಿ, ಜಿ.ಕೇಶವನ್, ಧರ್ಣಪ್ಪ ಗೌಡ ಪಿಲತ್ತಡಿ, ಸುಂದರ ಗೌಡ ಬಳ್ಳೇರಿ, ಯತೀಶ್ ಸಾಂತ್ಯಡ್ಕ ಜಾಲು, ಜತ್ತಪ್ಪ ಗೌಡ ದರ್ಖಾಸು, ವಿನಯಪ್ರಸಾದ್ ಬಳಕ್ಕ, ಜನಾರ್ದನ ಗೌಡ ಬಳಕ್ಕ, ಹರಿಶ್ಚಂದ್ರ ಅಡೆಂಜ, ಹರಿಪ್ರಸಾದ್ ಎನ್ಕಾಜೆ, ದುರ್ಗಾಪ್ರಸಾದ್ ಕೆ.ಪಿ, ವೆಂಕಟ್ರಮಣ ಎಸ್.ಜೆ, ರಾಮಣ್ಣ ಗೌಡ ಕೋರಿಜಾಲು, ಕುಶಾಲಪ್ಪ ಗೌಡ ಬಳಕ್ಕ, ತಿರುಮಲೇಶ್ವರ ಸಾಕೋಟೆ, ಅನಿಲ್ ಕುಮಾರ್ ಕೆರ್ನಡ್ಕ, ಪ್ರಭಾಕರ ಬಳಕ್ಕ, ಸುಂದರ ದೋಂತಿಲಡ್ಕ ಮತ್ತಿತರರು ಉಪಸ್ಥಿತರಿದ್ದರು.

ನೂಜಿಬಾಳ್ತಿಲ ಗ್ರಾಪಂ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಿಡಿಒ ಗುರುವ ಎಸ್. ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net