ಮೂಲ್ಕಿ: ದೀಪಾವಳಿ ಹಬ್ಬದ ವೈಜ್ಞಾನಿಕ ತತ್ವಗಳು ಹಾಗೂ ಸಾಂಸ್ಕೃತಿಕ ಮತ್ತು ಸಾವಾಜಿಕ ಸತ್ವಗಳನ್ನು ಯುವಜನತೆಗೆ ತಿಳಿಸುವ ಕಾರ್ಯ ಅಭಿನಂದನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಹೇಳಿದರು.
ಮೂಲ್ಕಿ ಬಿಲ್ಲವ ಸವಾಜ ಸೇವಾ ಸಂದ ಸಭಾಗೃಹದಲ್ಲಿ ಭಾನುವಾರ ಯುವವಾಹಿನಿ ಮೂಲ್ಕಿ ಟಕದ ಆಶ್ರಯದಲ್ಲಿ 22ನೇ ವರ್ಷದ ತುಳುವೆರೆ ತುಡರ ಪರ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸವಾಜ ಸೇವಕ ಕೃಷ್ಣಪ್ಪ ಎಸ್.ಸನಿಲ್ ವಾನಂಪಾಡಿ ಅವರಿಗೆ ತುಡರ ಪರ್ಬದ ತಮ್ಮನ(ಸನ್ಮಾನ) ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೂಡುದೀಪ ಸ್ಪರ್ಧೆ, ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುವಾನ ವಿತರಿಸಲಾಯಿತು. ಗೋ ಪೂಜೆ, ಬಲೀಂದ್ರ ಪೂಜೆ, ತಿಬಿಲಸಾನಾದಿಯ ಬೆಳಕಿನ ಹಬ್ಬ, ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಯುವವಾಹಿನಿ ಟಕದ ಅಧ್ಯಕ್ಷ ರಿತೇಶ್ ಮೂಲ್ಕಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಮನೋ ವೈದ್ಯಕೀಯ ಸವಾಲೋಚಕ ಎಸ್.ಕೆ.ಶ್ರೀಪತಿ ಭಟ್, ಪೋಸ್ಟ್‌ವಾಸ್ಟರ್ ಮೊಹಮ್ಮದ್ ಸಲೀಂ ಕೆಂಪುಗುಡ್ಡೆ, ಮಂಗಳೂರು ಪಾದುವ ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯಶಿಕ್ಷಕ ಪ್ರಾನ್ಸಿಸ್ ಡಿಕುನ್ಹ ಕಾರ್ನಾಡ್, ಕಾರ್ಯಕ್ರಮ ನಿರ್ದೇಶಕರಾದ ರಾಜೇಶ್ವರೀ ನಿತ್ಯಾನಂದ, ವಿನಯಾ ವಿಶ್ವನಾಥ್ ಉಪಸ್ಥಿತರಿದ್ದರು.
ರಿತೇಶ್ ಅಂಚನ್ ಸ್ವಾಗತಿಸಿದರು. ವಾಜಿ ಅಧ್ಯಕ್ಷ ಮೋಹನ್ ಸುವರ್ಣ ಪ್ರಸ್ತಾವನೆಗೈದರು. ಉದಯ ಅಮೀನ್ ಮಟ್ಟು ನಿರೂಪಿಸಿದರು. ಲತೀಶ್ ಕಾರ್ನಾಡ್ ವಂದಿಸಿದರು.
ಕರಾವಳಿಯ ತುಳು ಭೂಮಿಯ ಪರಂಪರಾಗತ ಕೃಷಿ ಪದ್ಧತಿಯಲ್ಲಿ ಪ್ರಕೃತಿ ಮತ್ತು ಕೃಷಿ ಸಲಕರಣೆಗಳು, ಸಹಾಯಕ ಜಾನುವಾರುಗಳನ್ನು ಗೌರವಿಸಿ ಕೃತಜ್ಞತೆ ಅರ್ಪಿಸುವ ಜತೆಗೆ ಧಾರ್ಮಿಕ ಸುಧಾರಕ ಬಲಿ ಚಕ್ರವರ್ತಿಯನ್ನು ನೆನಪಿಸುವ ಕಾರ್ಯ ಸ್ತುತ್ಯರ್ಹ. ಮೂಲ್ಕಿ ಯುವವಾಹಿನಿ ಟಕ ತುಳುವೆರೆ ತುಡರ ಪರ್ಬದ ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಯುವಜನತೆಗೆ ತಿಳಿಸುತ್ತಾ ಬಂದಿರುವುದು ವಾದರಿ.
ಹರೀಶ್ ಕೆ.ಪೂಜಾರಿ, ಅಧ್ಯಕ್ಷರು,
ಯುವವಾಹಿನಿ ಕೇಂದ್ರ ಸಮಿತಿ
https://www.vijayavani.net/ncc-lt-degree-to-satish-k-m