ಕಾರ್ಯಕರ್ತರ ಮನೆಗೆ ಬಿಜೆಪಿ ಜಿಲ್ಲಾ ನಿಯೋಗ ಭೇಟಿ

bjp
Published on

ಉಳ್ಳಾಲ: ದೀಪಾವಳಿ ಹಬ್ಬದ ಪ್ರಯುಕ್ತ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದ ನಿಯೋಗ ಹಿರಿಯ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಜನಸಂಘದ ಕಾಲದಿಂದ ಬಿಜೆಪಿ ಆರಂಭದ ಬಳಿಕವೂ ದೇಶಸೇವೆಯ ಧ್ಯೇಯದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಭದ್ರಗೊಳಿಸಿದ ಹಿರಿಯ ನಾರಾಯಣ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ ನಿಯೋಗ ಕುಟುಂಬಸ್ಥರಿಗೆ ಶುಭ ಹಾರೈಸಿದರು.

ಬಳಿಕ ದಿ.ಸಿ.ಜಿ.ಕಾಮತ್ ಅವರ ಪುತ್ರ ಗಣಪತಿ ಸಿ.ಜಿ.ಕಾಮತ್ ಅವರ ಮನೆಗೆ ನಿಯೋಗ ಭೇಟಿ ನೀಡಿತು. ಶಾಸಕ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಮನಪಾ ಸದಸ್ಯರಾದ ಪೂರ್ಣಿಮಾ, ಮನೋಹರ್ ಶೆಟ್ಟಿ, ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಹೆಗಡೆ, ಲಲ್ಲೇಶ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net