

ಮೂಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ರಂಗ ಪೂಜೆ, ತುಳಸಿ ಪೂಜೆ, ಶ್ರೀ ಬಲಿಂದ್ರ ಪೂಜೆ, ಶ್ರೀ ದೇವರ ಈ ವರ್ಷದ ಪ್ರಥಮ ಉತ್ಸವ ಬಲಿ ಕ್ಷೇತ್ರದ ತಂತ್ರಿ ವೇದವ್ಯಾಸ ತಂತ್ರಿ ಹಾಗೂ ಅರ್ಚಕ ಪುರುಷೋತ್ತಮ ಭಟ್ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ನಡೆಯಿತು.
ಡಾ.ಶ್ರೀವತ್ಸ ಉಪಾಧ್ಯಾಯ, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್ ಶೆಟ್ಟಿ, ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಕಲ್ಪನಾ ಬಲ್ಲಾಳ್, ಪ್ರಭಾರ ಪ್ರಬಂಧಕ ರಕ್ಷಿತ, ಜಯ ದೇವಾಡಿಗ, ಸತೀಶ್ಚಂದ್ರ ಅಜಿಲ, ಗೋಪಾಲ್ ಶಿಮಂತೂರು, ವೇಣುಗೋಪಾಲ ಶೆಟ್ಟಿ, ಸತೀಶ್ ಶೆಟ್ಟಿ, ವಿಟಲ್ ಶೆಟ್ಟಿ, ಸುರೇಶ್ ಶೆಟ್ಟಿ ಶಿಮಂತೂರು, ಯುವಕ ಮಂಡಲ ಮತ್ತು ಮಹಿಳಾ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.