ಉಗ್ರಗಾಮಿ ಶಕ್ತಿಗಳ ವಿರುದ್ಧ ಪ್ರಬಲ ಉತ್ತರ ಅವಶ್ಯ: ಎನ್.ಬಾಬುರಾಜ್ ಅಭಿಮತ

New Project (25)
Published on

ಕಾಸರಗೋಡು: ಭಾರತದಲ್ಲಿ ಬಲಗೊಳ್ಳುತ್ತಿರುವ ಧರ್ಮಾಧಾರಿತ ಉಗ್ರಗಾಮಿ ಶಕ್ತಿಗಳ ವಿರುದ್ಧ ಸಮಾಜವು ಪ್ರಬಲವಾಗಿ ಪ್ರತಿಕ್ರಿಯಿಸಲು ಸಿದ್ಧವಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ತಿಳಿಸಿದ್ದಾರೆ.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ವಿರುದ್ಧ ಬಿಜೆಪಿ ಉದುಮ ಮಂಡಲ ಸಮಿತಿ ಉದುಮದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.

ಮಂಡಲ ಸಮಿತಿ ಅಧ್ಯಕ್ಷೆ ಶೈನಿ ಮೋಲ್ ಶಶಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಉಪಾಧ್ಯಕ್ಷ ತಂಬಾನ್ ಆಚೇರಿ, ಎಂ.ಸದಾಶಿವನ್, ಕೆ.ಕಾರ್ತ್ಯಾಯಿನಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿಗಳು ಮುರಳೀಧರನ್ ನಾಯರ್ ಸ್ವಾಗತಿಸಿದರು. ಪ್ರದೀಪ್ ಎಂ. ಕೂಟಕಣಿ ವಂದಿಸಿದರು.

ಕಾಶ್ಮೀರಕ್ಕೆ ಸೀಮಿತವಾಗಿದ್ದ 370ನೇ ವಿಧಿಯನ್ನು ಸಂವಿಧಾನದಿಂದ ತೆಗೆದುಹಾಕಿದ ನಂತರ ಶಾಂತಿಯುತವಾಗಿದ್ದ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಯಿಂದ ಅಶಾಂತಿ ಹುಟ್ಟುಹಾಕಲು ಯತ್ನಿಸಿರುವುದು ಖಂಡನೀಯ. ಹೆಸರು ಕೇಳಿ, ಧಾರ್ಮಿಕ ಪ್ರೇರಿತವಾಗಿ ನಡೆದ ಪ್ರವಾಸಿಗರ ಹತ್ಯೆಯ ಭಯಾನಕ ಟನೆಯಿಂದ ಸಾವಿಗೀಡಾದವರಿಗೆ ದೇಶದ ಜನತೆ ಮರುಗುವಂತಾಗಿದೆ. ಎನ್.ಬಾಬುರಾಜ್, ಬಿಜೆಪಿ ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net