

ಬಂಟ್ವಾಳ: ಇಡೀ ದೇಶವೇ ತಲೆತಗ್ಗಿಸುವ ಕೃತ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಇದನ್ನು ಖಂಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ಕ್ರಮವನ್ನು ಬೆಂಬಲಿಸಬೇಕು ಎಂದು ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಹೇಳಿದರು.
ಕಾಶ್ಮೀರದಲ್ಲಿ ಉಗ್ರಗಾಮಿಗಳು ಪ್ರವಾಸಕ್ಕೆ ತೆರಳಿದ ಹಿಂದುಗಳನ್ನು ಭೀಕರ ಹತ್ಯೆ ಮಾಡಿದ ಟನೆಯನ್ನು ಖಂಡಿಸಿ ಹಾಗೂ ಕ್ರಮಕ್ಕೆ ಒತ್ತಾಯಿಸಿ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಹಿಂದು ಸಂಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ, ರಾಮದಾಸ ಬಂಟ್ವಾಳ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿದರು.
ನಾನಾ ಹಿಂದು ಸಂಟನೆಗಳು ಪ್ರತಿಭಟನೆಗೆ ಸಾಥ್ ನೀಡಿದರು. ಬಳಿಕ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ, ಹಣತೆ ಬೆಳಗಿಸಲಾಯಿತು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಜಿ.ಕೆ.ಭಟ್, ಅಜಯ್ ಕಾಂಪ್ರಬೈಲ್, ನರಸಿಂಹ ಮಾಣಿ, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಸುಲೋಚನಾ ಜಿ.ಕೆ.ಭಟ್, ತಿರುಲೇಶ್ ಬೆಳ್ಳೂರು, ಸುಜಿತ್ ಕೊಟ್ಟಾರಿ, ಪ್ತಭಾಕರ ಪ್ರಭು, ದಿನೇಶ್ ಅಮ್ಟೂರು, ಶಿವಪ್ರಸಾದ್ ಶೆಟ್ಟಿ, ಕ.ಕೃಷ್ಣಪ್ಪ, ಯಶೋಧರ ಕರ್ಬೆಟ್ಟು, ಡೊಂಬಯ ಅರಳ, ಭರತ್ ಕುಮ್ಡೇಲು, ರೇಷ್ಮಾ ಶಂಕರಿ ಬಲಿಪಗುಳಿ, ರತ್ನಾಕರ ಶೆಟ್ಟಿ, ಲಖಿತಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಸಮಿತ್ ರಾಜ್ ದರೆಗುಡ್ಡೆ ನಿರ್ವಹಿಸಿದರು.