‘ವಾತ್ಸಲ್ಯ’ ಬಡವರ ಪಾಲಿಗೆ ನಂದಾದೀಪ : ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

15
Published on

ಬೆಳ್ತಂಗಡಿ: ಬದುಕಿನುದ್ದಕ್ಕೂ ಶ್ರಮ ಜೀವನ ಮಾಡಿ ಹೋರಾಡಿ ಬಳಲಿ ಬೆಂಡಾದ ಹಿರಿಯ ಜೀವಗಳಿಗೆ ಅಂತಿಮ ದಿನಗಳಲ್ಲಿ ಗೌರವದ, ನೆಮ್ಮದಿಯ ಸಂತೃಪ್ತ ಜೀವನ ಮಾಡಲು ಸೂರನ್ನು ಕಟ್ಟಿ ಕೊಡುವ ಕಾರ್ಯಕ್ರಮವೇ ‘ವಾತ್ಸಲ್ಯ’. ರಾಜ್ಯದೆಲ್ಲೆಡೆ ಈಗಾಗಲೆ 610 ಮನೆಗಳನ್ನು ಈ ಯೋಜನೆಯಡಿ ನಿರ್ಮಿಸಿದ್ದು, ಬಡವರ ಪಾಲಿಗೆ ನಂದಾದೀಪವಾಗಿವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದ ಬೀಡಿನಲ್ಲಿ ಬುಧವಾರ ಪೂಜಾ ಪ್ರಶಾಂತ್ ಶೆಟ್ಟಿ ರಚಿಸಿದ ‘ವತ್ಸಲೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಹೇಮಾವತಿ ವಿ.ಹೆಗ್ಗಡೆ ಶುಭಹಾರೈಸಿದರು. ಲೇಖಕಿ ಪೂಜಾ ಪ್ರಶಾಂತ್ ಶೆಟ್ಟಿ ಅವರನ್ನು ಹೇಮಾವತಿ ವಿ.ಹೆಗ್ಗಡೆ ಅಭಿನಂದಿಸಿದರು. ಸಂದೀಪ್ ದೇವ್ ಸಹಕರಿಸಿದರು.

ಪ್ರಮುಖರಾದ ಡಿ.ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಸೋನಿಯಾ ಯಶೋವರ್ಮ, ಅಮಿತ್, ಶ್ರದ್ಧಾ ಅಮಿತ್, ಡಿ.ಹಷೇರ್ಂದ್ರ ಕುಮಾರ್, ಡಿ.ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಪ್ರಾದೇಶಿಕ ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಚ್ಟ ಮೊದಲಾದವರಿದ್ದರು.

ವಾತ್ಸಲ್ಯ ಯೋಜನೆಯ ಅನುಷ್ಠಾನದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ನಿಷ್ಠೆ, ಕಾಳಜಿ ಹಾಗೂ ಶ್ರಮ ಶ್ಲಾಘನಾರ್ಹ. ಇದು ತಮಗೆ ಅತ್ಯಂತ ಆಪ್ತವಾದ ಕಾರ್ಯಕ್ರಮವಾಗಿದ್ದು, ‘ವಾತ್ಸಲ್ಯ’ ನಿವಾಸಿಗಳ ಪ್ರೀತಿ, ವಿಶ್ವಾಸ ಹಾಗೂ ಗೌರವ ತಿಳಿದು ನಮಗೆ ಸಂತೋಷವಾಗಿದೆ. ತಮ್ಮನ್ನೂ ಪ್ರೀತಿಸುವವರು ಅಭಯ ನೀಡುವವರೂ ಇದ್ದಾರೆ ಎಂಬ ವಿಶ್ವಾಸದಿಂದ ಅವರು ಇಂದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಹೇಮಾವತಿ ವಿ.ಹೆಗ್ಗಡೆ https://www.vijayavani.net/lady-lions-day-in-bantwal https://www.vijayavani.net/candlelight-vigil-to-pay-tribute-to-those-killed-in-terrorist-attacks

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net