ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಬಲ : ಸಚಿವೆ ಡಾ.ಆರ್.ಬಿಂದು ಹೇಳಿಕೆ

New Project (29)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಶಿಕ್ಷಣದಲ್ಲಿ ಮಹತ್ವದ ಸುಧಾರಣೆ ತರುವುದರೊಂದಿಗೆ ಹೊಸ ಪೀಳಿಗೆಗಾಗಿ ತಾಂತ್ರಿಕ ಕೋರ್ಸ್‌ಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೇರಳದಲ್ಲಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಹೇಳಿದರು.

ರಾಜ್ಯ ಸರ್ಕಾರದ ಐದನೇ 100 ದಿನಗಳ ಕ್ರಿಯಾ ಯೋಜನೆಯ ಭಾಗವಾಗಿ ಕಾಸರಗೋಡು ಪೊವ್ವಲ್‌ನ ಲಾಲ್‌ಬಹದ್ದೂರ್ ಶಾಸ್ತ್ರಿ(ಎಲ್‌ಬಿಎಸ್) ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭವಾಗುತ್ತಿರುವ ಐದು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ ಮತ್ತು ವ್ಯವಹಾರ ವ್ಯವಸ್ಥೆಗಳು, ಅಗ್ನಿಶಾಮಕ ಮತ್ತು ಸುರಕ್ಷತಾ ವ್ಯವಸ್ಥೆಗಳಂತಹ ಬಿ.ಟೆಕ್ ಕೋರ್ಸ್‌ಗಳಿಗೆ ಹೆಚ್ಚುವರಿ ತರಗತಿ, ನವೀಕರಿಸಿದ ವಿದ್ಯುತ್ ಇಲಾಖೆ ಬ್ಲಾಕನ್ನು ಸಚಿವರು ಉದ್ಘಾಟಿಸಿದರು. ಕಾಲೇಜಿನ ಇಲೆಕ್ಟ್ರಾನಿಕ್ ವಿಭಾಗಕ್ಕೆ ಮಾನ್ಯತೆ ದೊರೆತಿರುವುದನ್ನು ಸಚಿವರು ಘೋಷಿಸಿದರು.

ಉದುಮ ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಅಕಾಡೆಮಿಕ್ ಅಲೈಯನ್ಸ್‌ನ ಟಿಸಿಎಸ್ ಅಕಾಡೆಮಿಯ ಗ್ರೂಪ್ ಮುಖ್ಯಸ್ಥ ಡಾ.ಕೆ.ಎಂ.ಸುಶೀಂದ್ರನ್ ಮುಖ್ಯ ಭಾಷಣ ಮಾಡಿದರು. ಮುಳಿಯಾರ್ ಗ್ರಾಪಂ ಅಧ್ಯಕ್ಷೆ ಪಿ.ವಿ.ಮಿನಿ, ವಾರ್ಡ್ ಸದಸ್ಯೆ ನಬೀಸಾ ಸತ್ತಾರ್, ಎಲ್‌ಬಿಎಸ್ ಕೇಂದ್ರದ ಜಂಟಿ ನಿರ್ದೇಶಕ ಡಾ.ಜೆ.ಜಯಮೋಹನ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಅಕಾಡೆಮಿ ಅಲೈಯನ್ಸ್ ಕೇರಳ ಪ್ರದೇಶ ಮುಖ್ಯಸ್ಥ ರಾಜೀವ್ ಶ್ರೀನಿವಾಸ್, ಎಲ್‌ಬಿಎಸ್ ಇಂಜಿನಿಯರಿಂಗ್ ಕಾಲೇಜು ಪಿಟಿಎ ಉಪಾಧ್ಯಕ್ಷ ಮುಜೀಬ್ ರೆಹಮಾನ್ ಮಾಙೌಡ್ ಮತ್ತು ಪಿಟಿಎ ಕಾರ್ಯದರ್ಶಿ ಸಿ.ವಿ.ಕೃಷ್ಣನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net