ಕೇರಳ ಪಿಂಚಣಿದಾರರ ಸಂಘದಿಂದ ಧರಣಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

New Project (17)
Published on

ಕಾಸರಗೋಡು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೇರಳ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇತ್ತೀಚೆಗೆ ಧರಣಿ ನಡೆಯಿತು.

ಹನ್ನೆರಡನೇ ಪಿಂಚಣಿ ಸುಧಾರಣಾ ಪ್ರಕ್ರಿಯೆ ತಕ್ಷಣ ಆರಂಭಿಸಬೇಕು. ಶಾಸನಬದ್ಧ ಪಿಂಚಣಿ ಮರುಸ್ಥಾಪಿಸಬೇಕು. 11ನೇ ಪಿಂಚಣಿ ಸುಧಾರಣೆಯಲ್ಲಿನ ಕ್ಷಾಮ ಪರಿಹಾರದ ಎರಡನೇ ಕಂತು ತಕ್ಷಣ ಬಿಡುಗಡೆ ಮಾಡಬೇಕೆಂಬುದರ ಸಹಿತ ವಿವಿಧ ಬೇಡಿಕೆ ಮುಂದಿರಿಸಲಾಯಿತು.

ಕೇರಳ ರಾಜ್ಯ ಪಿಂಚಣಿದಾರರ ಸಂದ ರಾಜ್ಯ ಕಾರ್ಯದರ್ಶಿ ಕೆ.ಟಿ.ಮಧುಸೂದನನ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಮುತ್ತುಕೃಷ್ಣನ್, ಈಶ್ವರ್ ರಾವ್, ಸವಿತಾ, ನಾರಾಯಣನ್, ದಿಲೀಪ್ ಕುಮಾರ್, ಅಶೋಕ್ ಬಾಡೂರ್ ಮೊದಲಾದವರು ಉಪಸ್ಥಿತರಿದ್ದರು. ಕುಞಿರಾಮನ್ ಕೇಳೋತ್ ಸ್ವಾಗತಿಸಿದರು. ವಿ.ಕೆ ಕುಞಂಬು ವಂದಿಸಿದರು. ಧರಣಿಗೂ ಮೊದಲು ಸದಸ್ಯರಿಂದ ಬಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net