ಕಥಾಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Bdk_Prize
Published on

ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಇತ್ತೀಚೆಗೆ ಕಿಳಿಂಗಾರು ಸಾಯಿನಿಲಯಕ್ಕೆ ಆಗಮಿಸಿದ್ದ ಸಂದರ್ಭ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಪ್ರಥಮ ಬಹುಮಾನ ಪಡೆದ ಧನ್ಯಶ್ರೀ ಸರಳಿ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಾದ ಚೈತನ್ಯಾ ನಿಡುಬೆ ಮತ್ತು ಸರಸ್ವತಿ ಆರ್.ಜಿ.ಭಟ್ ಅವರಿಗೂ ಬಹುಮಾನ ವಿತರಿಸಲಾಯಿತು. ಕೊಡಗಿನ ಗೌರಮ್ಮ ದತ್ತಿನಿಧಿ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಉಪಸ್ಥಿತರಿದ್ದರು. ಶೀಲಾ ಲಕ್ಷ್ಮೀ ವರ್ಮುಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net