ಉಜಿರೆಯಲ್ಲಿ ಸಂಜೀವಿನಿ ಮಾಸಿಕ ಸಂತೆ

santhe
ಉಜಿರೆಯಲ್ಲಿ ನಡೆದ ಸಂಜೀವಿನಿ ಮಾಸಿಕ ಸಂತೆ.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮ ಜೀವನೋಪಾಯ ಸಂವರ್ಧನ ಸಂಸ್ಥೆ, ಮಂಗಳೂರು ಜಿಲ್ಲಾ ಪಂಚಾಯಿತಿ, ಬೆಳ್ತಂಗಡಿ ತಾಲೂಕು ಪಂಚಾಯಿತಿ ಹಾಗೂ ಉಜಿರೆ ಗ್ರಾ.ಪಂ. ಪ್ರೇರಣಾ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ ಮಾಸಿಕ ಸಂತೆ ಉಜಿರೆ ಪ್ರೇರಣಾ ಹಳ್ಳಿ ಸಂತೆ ಪ್ರಾಂಗಣದಲ್ಲಿ ನಡೆಯಿತು.

ಪ್ರೇರಣಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಪಂ ಉಪಾಧ್ಯಕ್ಷ ರವಿ ಬರಮೇಲು ಉದ್ಘಾಟಿಸಿದರು.

ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ನೇತ್ರಾವತಿ ತಾಲೂಕು ಮಟ್ಟದ ಒಕ್ಕೂಟದ ಅಧ್ಯಕ್ಷ ಮಧುರಾ, ಉಜಿರೆ ಗ್ರಾ.ಪಂ. ಸದಸ್ಯರಾದ ನಾಗೇಶ್ ರಾವ್, ಸಂಧ್ಯಾ ಹಾಗೂ ದೇವಕಿ ಉಪಸ್ಥಿತರಿದ್ದರು.

ವಿವಿಧ ಸಂಜೀವಿನಿ ಒಕ್ಕೂಟದಿಂದ ಆಗಮಿಸಿದ ಎಂಬಿಕೆಎಲ್‌ಸಿಆರ್‌ಪಿ ಹಾಗೂ ಉತ್ಪನ್ನಗಳನ್ನು ತಂದಿರುವ ಗುಂಪಿನ ಸದಸ್ಯರು, ಎನ್‌ಆರ್‌ಎಲ್‌ಎಂ ತಾಲೂಕು ನಿರ್ವಹಣಾ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸ್ವಾಗತಿಸಿ, ವಲಯ ಮೇಲ್ವಿಚಾರಕರಾದ ಸ್ವಸ್ತಿಕ್ ಜೈನ್ ವಂದಿಸಿ, ಜಯಾನಂದ ನಿರೂಪಿಸಿದರು. ತಾಲೂಕು ವ್ಯವಸ್ಥಾಪಕ ನಿತೀಶ್ ಮತ್ತು ವಲಯ ಮೇಲ್ವಿಚಾರಕಿ ವೀಣಾಶ್ರೀ ಕೆ.ಕೆ.ಸಹಕರಿಸಿದರು.

ಸಂತೆಯಲ್ಲಿ ಏನಿತ್ತು?

ಸಂಜೀವಿನಿ ಮಾಸಿಕ ಸಂತೆಯಲ್ಲಿ ಸೋಪ್, ನ್ಯೂಟ್ರಿಮಿಕ್ಸ್, ವೀಳ್ಯದೆಲೆ, ಗೆಣಸು, ಹಲಸಿನ ಹಣ್ಣು, ಹಲಸಿನ ಹಣ್ಣಿನ ಬೀಜ, ಜೋಳ ರೊಟ್ಟಿ, ಫಿನಾಯಿಲ್, ತೆಂಗಿನಎಣ್ಣೆ, ಜೇನುತುಪ್ಪ, ತುಪ್ಪ, ಬತ್ತಿ, ಕರಿ ಕೆಸು, ಬ್ರಾಹ್ಮೀ, ನುಗ್ಗೆಸೊಪ್ಪು ಇತ್ಯಾದಿ ವಸ್ತುಗಳು ಮಾರಾಟ ನಡೆಯಿತು. ಪ್ರತಿ ತಿಂಗಳ ಮೊದಲ ಶನಿವಾರ ಸಂಜೀವಿನಿ ಮಾಸಿಕ ಸಂತೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net