ಶ್ರೀ ಕ್ಷೇತ್ರ ಪೊಳಲಿಗೆ ತೆಲುಗು ಚಿತ್ರ ನಿರ್ಮಾಪಕ ಮೋಹನ್ ಬಾಬು ಭೇಟಿ

web - polali
ಪೊಳಲಿ ದೇವಸ್ಥಾನಕ್ಕೆ ಭಾನುವಾರ ತೆಲುಗು ಚಿತ್ರರಂಗದ ನಿರ್ಮಾಪಕ ಮೋಹನ್ ಬಾಬು ಅವರು ಭೇಟಿ ನೀಡಿ, ದೇವರ ದರ್ಶನ ಪಡೆದರು. ಅರ್ಚಕ ಪದ್ಮನಾಭ ಭಟ್, ಕೆ.ರಾಮ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮೊದಲಾದವರಿದ್ದರು.
Published on

ಗುರುಪುರ: ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭಾನುವಾರ ತೆಲುಗು ಚಿತ್ರರಂಗದ ನಿರ್ಮಾಪಕ ಮೋಹನ್ ಬಾಬು ಅವರು ಭೇಟಿ ನೀಡಿ, ದೇವರ ದರ್ಶನ ಪಡೆದರು.

ಜತೆಗಿತ್ತು ಹೊಸ ಚಿತ್ರದ ತಂಡ

ಮೋಹನ್ ಬಾಬು ಹಾಗೂ ಅವರ ಜತೆಯಲ್ಲಿ ಹೊಸ ಚಿತ್ರದ ತಂಡದ ಸದಸ್ಯರಿದ್ದು, ದೇವಸ್ಥಾನದ ಅರ್ಚಕ ಪದ್ಮನಾಭ ಭಟ್ ಪ್ರಸಾದ ವಿತರಿಸಿದರು. ಪ್ರಧಾನ ಅರ್ಚಕ ಕೆ.ರಾಮ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್, ಪವಿತ್ರಪಾಣಿ ಹಾಗೂ ಆನುವಂಶಿಕ ಮೊಕ್ತೇಸರ ಮಾಧವ ಭಟ್, ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

60 ಕೋಟಿ ರೂ. ವೆಚ್ಚದಲ್ಲಿ ಹೊಸ ಚಿತ್ರ

ಮೋಹನ್ ಬಾಬು ಅವರು ಸುಮಾರು 60 ಕೋಟಿ ರೂ. ವೆಚ್ಚದ ಚಿತ್ರವೊಂದು ನಿರ್ಮಿಸುತ್ತಿದ್ದಾರೆ. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net